(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 21. ನಗರದಲ್ಲಿ ಇದೇ ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿಯನ್ನು (ಆಟೋಲೋಗಸ್ ಟ್ರಾನ್ಸ್ ಪ್ಲಾಂಟ್) ದೇರಳಕಟ್ಟೆಯ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಖ್ಯಾತ ರಕ್ತ ಶಾಸ್ತ್ರಜ್ಞ, ಡಾ| ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕದ್ರಿ ಮೂಲದ 59 ವಯಸ್ಸಿನ ವ್ಯಕ್ತಿಯೋರ್ವರು ಮೆದುಳಿನ ಲಿಂಪೋಮಾ ಕಾಯಿಲೆಗೆ ಕೀಮೋಥೆರಪಿಯನ್ನು ಪಡೆಯುತ್ತಿದ್ದರು. ಜುಲೇಖಾ ಯೆನೆಪೋಯ ಆಸ್ಪತ್ರೆಗೆ ಬಂದ ಈ ವ್ಯಕ್ತಿಯನ್ನು ಸ್ವಅಸ್ಥಿ ಮಜ್ಜಿ ಕಸಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅವರ ಅಸ್ಥಿಮಜ್ಜಿಯನ್ನು ತೆಗೆದು ಶೀತಲೀಕರಿಸಿ, ಥಯೋಟೀಪಾ ಎಂಬ ಕೀಮೋಥೆರಪಿಯನ್ನು ನೀಡಿ ನಂತರ ರೋಗಿಯು ಅಸ್ಥಿಮಜ್ಜಿಯನ್ನು ಪುನಃ ಅಳವಡಿಸಲಾಯಿತು. ಬಳಿಕ ನಾಲ್ಕು ವಾರದಲ್ಲಿ ರೋಗಿಯು ಗುಣಮುಖರಾಗಿದ್ದಾರೆ.