ಹಿಂದಿನ ನಿಯಮಗಳನ್ನು ಅನುಸರಿಸುವಂತೆ ಆಗ್ರಹ   ಎನ್ ಎಸ್ ಯುಐ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 21.  ಈ ಹಿಂದೆ ಅನುಸರಿದ ನಿಯಮಗಳನ್ನೇ ಕಾಲೇಜಿನಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ (ಎನ್‌ ಎಸ್‌ ಯುಐ) ನೇತೃತ್ವದಲ್ಲಿ ಕಾಲೇಜಿನ ಮುಂಭಾಗದ ಗೇಟ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿನಿ ಸ್ವಾತಿ ಪೂಜಾರಿ, ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೆಂಬಲ ಸಿಗುತ್ತಿಲ್ಲ. ಅಲ್ಲದೇ ಏನೇ ಮಾಡುವುದಿದ್ದರೂ ವಿದ್ಯಾರ್ಥಿಗಳೇ ಕೈಯಿಂದ ಹಣ ಹಾಕಿ ಮಾಡಬೇಕಾಗಿದೆ. ಕಾಲೇಜಿನಿಂದಲೇ ಹಿಂದಿನಂತೆ ಬೆಂಬಲ ಸಿಕ್ಕರೆ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದರು.

Also Read  ದ.ಕ ಜಿಲ್ಲಾ ಸರಕಾರಿ ಡಿ ವರ್ಗ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂಪಾಯಿ 50ಸಾವಿರ ರೂ. ಹಸ್ತಾಂತರ

                                                                                                                                                                           

 

error: Content is protected !!
Scroll to Top