ಅಪೆಕ್ಸ್ ಬ್ಯಾಂಕಿನ ಸಿ.ಜಿ.ಎಂ ಹುದ್ದೆಗೇರಿದ ದ.ಕ. ಜಿಲ್ಲೆಯ ಮೊದಲ ವ್ಯಕ್ತಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 21. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇದರ ಮುಖ್ಯ ಪ್ರಧಾನ ವ್ಯವಸ್ಥಾಪಕ (ಹಣಕಾಸು, ಲೆಕ್ಕ ಪರಿಶೋಧನೆ ವಿಭಾಗ) ಹುದ್ದೆಗೆ ಸುಳ್ಯ ತಾಲೂಕಿನ ಚೊಕ್ಕಾಡಿಯ ವಸಂತ ಕುಮಾರ್ ಪೋನಡ್ಕ ನೇಮಕಗೊಂಡಿದ್ದಾರೆ.

 

ಇವರು ಭಡ್ತಿಯನ್ನು ಹೊಂದಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕಿನ ಸಿ.ಜಿ.ಎಂ. ಹುದ್ದೆಗೇರಿದ ದ.ಕ. ಜಿಲ್ಲೆಯ ಪ್ರಥಮ ವ್ಯಕ್ತಿ ಇವರಾಗಿದ್ದಾರೆ. ಇವರು ಪೋನಡ್ಕ ದಿ. ಪರಮೇಶ್ವರಯ್ಯ ಮತ್ತು ದಿ. ಸಾವಿತ್ರಿ ದಂಪತಿ ಪುತ್ರ.

error: Content is protected !!
Scroll to Top