ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ 72 ಲಕ್ಷ ರೂ. ವಂಚನೆ, ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಆ. 21. ಫೈನಾನ್ಸ್ ನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ, ಒಟ್ಟು 75 ಲಕ್ಷರೂ.ಗಳನ್ನು ವಂಚಿಸಿದ ಘಟನೆಯೊಂದು ಬ್ರಹ್ಮಾವರದಿಂದ ತಡವಾಗಿ ಬೆಳಕಿಗೆ ಬಂದಿದೆ.

 

ಸುವಾಸಿನಿ ಹಾಗೂ ಆತನ ಸಹೋದರ ವಾದಿರಾಜ ಎಂಬವರು ನಡೂರಿನ ನಿತ್ಯಾನಂದ ಎಂಬವರಿಗೆ 35 ಲಕ್ಷ ರೂ.ಸೇರಿದಂತೆ ಹಲವರಿಗೆ ಒಟ್ಟು 75 ಲಕ್ಷ ರೂ.ವಂಚಿಸಿದ ಆರೋಪಿಗಳು. ಆರೋಪಿಗಳು ಮಣಿಪಾಲದ ಸಿಟಿಕಾರ್ಪ್ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಿತ್ಯಾನಂದ ಹಾಗೂ ಇತರರನ್ನು ನಂಬಿಸಿ 2023ರ ಡಿ. 11ರಿಂದ 2024ರ ಜು. 16ರ ವರೆಗೆ ಹಣವನ್ನು ಪಡೆದಿದ್ದರು ಎನ್ನಲಾಗಿದೆ. ಆದರೆ ಇದುವರೆಗೂ ಅವರು ಹೇಳಿದ ಚಿನ್ನವನ್ನು ನೀಡದೇ, ಹೂಡಿಕೆ ಮಾಡಿದ ಹಣವನ್ನೂ ಹಿಂದಿರುಗಿಸದೇ ವಂಚಿಸಿದಲ್ಲದೇ, ಹಣವನ್ನು ವಾಪಾಸು ಕೇಳಿದ್ದಕ್ಕೆ ಆರೋಪಿಗಳು ಬೆದರಿಕೆ ಹಾಕಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

Also Read  ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು

error: Content is protected !!
Scroll to Top