ಉಡುಪಿ: ಮೌನ ಪ್ರತಿಭಟನೆಯನ್ನು ಹಿಂಪಡೆದ ಕೆನರಾ ಬಸ್ ಮಾಲಕರ ಸಂಘ

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 21. ಹೆಜಮಾಡಿ ಮತ್ತು ಸಾಸ್ತಾನದ ಟೋಲ್‌ಗೇಟ್‌ಗಳಲ್ಲಿ ಸಂಚರಿಸುವ ಬಸ್‌ಗಳಿಗೆ ದುಪ್ಪಟ್ಟು ಶುಲ್ಕ ವಿಧಿಸುವುದನ್ನು ವಿರೋಧಿಸಿ ಆ.23ರಂದು ಕೈಗೊಳ್ಳಲು ಉದ್ದೇಶಿಸಿದ್ದ ಮೌನ ಪ್ರತಿಭಟನೆಯನ್ನು ಕೆನರಾ ಬಸ್‌ ಮಾಲಕರ ಸಂಘವು ಹಿಂಪಡೆದುಕೊಂಡಿದೆ ಎನ್ನಲಾಗಿದೆ.

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯಕ್ಕೆ ಹೆಚ್ಚುವರಿ ಶುಲ್ಕ ವಸೂಲಾತಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿರುವುದಾಗಿ ಮಾಹಿತಿ ನೀಡಿದೆ. ಒಂದು ವೇಳೆ ಮತ್ತೆ ಹೆಚ್ಚುವರಿ ಶುಲ್ಕ ವಿಧಿಸಿದರೆ ಪುನಃ ಪ್ರತಿಭಟನೆ ನಡೆಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದ್ದಾರೆ.

Also Read  ಅನಾರೋಗ್ಯದಿಂದಿದ್ದ ಕಡಬದ ಮಹಿಳೆ ವಿದೇಶದಲ್ಲಿ ಮೃತ್ಯು ► ಬಹ್ರೇನ್‌ನ ಸಲ್ಮಾನಿಯಾ ಆಸ್ಪತ್ರೆಯಿಂದ ಮೃತದೇಹ ನಾಳೆ ಹುಟ್ಟೂರಿಗೆ...

 

error: Content is protected !!
Scroll to Top