ಭಾರತೀಯ ರೈಲ್ವೇ ಇಲಾಖೆಯಲ್ಲಿ TTE ಹುದ್ದೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ಭಾರತೀಯ ರೈಲ್ವೇ ಇಲಾಖೆಯು ಇದೀಗ ಖಾಲಿಯಿರುವ 12000 TTE ಹುದ್ದೆಗೆ ನೇಮಕಾತಿ ಆರಂಭಿಸಿ, 2024ರ ಸಾಲಿನ TTE ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ಸೈಟ್ ಮೂಲಕ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಅವಕಾಶ ಮಾಡಿಕೊಡಲಾಗುತ್ತದೆ. ಈ ಮೂಲಕ ಭಾರತೀಯ ರೈಲ್ವೇಯಲ್ಲಿ ಅತೀ ದೊಡ್ಡ ನೇಮಕಾತಿ ಆರಂಭಗೊಂಡಿದೆ.

ಅರ್ಜಿ ಸಲ್ಲಿಸಲು ಬಯಸುವರಿಗೆ ಇರಬೇಕಾದ ಅರ್ಹತೆಗಳು-
ವಯಸ್ಸು ಜನವರಿ 1, 2024ಕ್ಕೆ ಅನುಗುಣವಾಗಿ ಕನಿಷ್ಠ 18 ಹಾಗೂ ಗರಿಷ್ಠ 30 ದಾಟಿರಬಾರದು. 10 ಹಾಗೂ 12ನೇ ತರಗತಿ ಪಾಸ್ ಆಗಿರುವುದು, ಡಿಪ್ಲೋಮಾ ಪೂರೈಸಿರುವ ಅಭ್ಯರ್ಥಿಗಳು TTE ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಬೇಕಾಗುವ ದಾಖಲೆಗಳು

ಜನನ ಪ್ರಮಾಣ ಪತ್ರ, 12ನೇ ತರಗತಿ ಅಥವಾ 10ನೇ ತರಗತಿ ಅಥವಾ ಡಿಪ್ಲೋಮಾ ಅಂಕ ಪಟ್ಟಿ ಪ್ರತಿಯನ್ನೂ ಲಗತ್ತಿಸಬೇಕು. ಇದರ ಜೊತೆಗೆ ಆಧಾರ್ ಕಾರ್ಡ್, ಪಠ್ಯೇತರ ಚಟುವಟಿಕಗಳಾದ ಕ್ರೀಡೆ ಸೇರಿದಂತೆ ಇತರ ಸಾಧನೆಗಳ ಪ್ರಮಾಣ ಪತ್ರ, ವಿಳಾಸ ದಾಖಲೆಗಳನ್ನು ನೀಡಬೇಕು. ಅರ್ಜಿ ಸಲ್ಲಿಕೆಗೆ ಆರಂಭಗೊಂಡ ಬಳಿಕ 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. 30 ದಿನದ ಬಳಿಕ ಸಲ್ಲಿಸಿದ ಅರ್ಜಿಗಳನ್ನು ಮಾನ್ಯಗೊಳಿಸಲಾಗುವುದಿಲ್ಲ. ಅರ್ಜಿ ಸಲ್ಲಿಕೆ ವೇಳೆ ಅಪೇಕ್ಷಿಸುವ ಹುದ್ದೆ, ಕೆಟಗರಿ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.

Also Read  ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ - ಅರ್ಜಿ ಆಹ್ವಾನ

ಕಂಪ್ಯೂಟರ್ ಟೆಸ್ಟ್ ಹಾಗೂ ಫಿಸಿಕಲ್ ಟೆಸ್ಟ್ ಎರಡು ಮಾದರಿಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲು ಕಂಪ್ಯೂಟರ್ ಪರೀಕ್ಷೆಯಲ್ಲಿ 200 ಅಂಕಗಳ ಪ್ರಶ್ನೆ ಕೇಳಲಾಗುತ್ತದೆ. ಸಾಮಾನ್ಯ ಜ್ಞಾನದಿಂದ ಹಿಡಿದು ಕೆಲ ವಿಷಯಗಳ ಕುರಿತು ಪರೀಕ್ಷೆ ಇದಾಗಿರುತ್ತದೆ. 2 ಗಂಟೆ ಅವಧಿಯಲ್ಲಿ ಪರೀಕ್ಷೆ ಬರೆಯಬೇಕು. ತಪ್ಪು ಉತ್ತರಕ್ಕೆ ಅಂಕ ಕಡಿತಗೊಳ್ಳಲಿದೆ. ಫಿಸಿಕಲ್ ಟೆಸ್ಟ್‌ನಲ್ಲಿ ಆರೋಗ್ಯ, ದೈಹಿಕ ಸಾಮರ್ಥ್ಯ ಸೇರಿದಂತೆ ಇತರ ಕೆಲ ಪರೀಕ್ಷೆಗಳು ನಡೆಯಲಿದೆ.

Also Read  ಡಾ| ಮುರಲೀ ಮೋಹನ್ ಚೂಂತಾರು ► ಸುಬ್ರಹ್ಮಣ್ಯ ಘಟಕಕ್ಕೆ ಭೇಟಿ

ಅರ್ಜಿ ಸಲ್ಲಿಸಲು ಬಯಸುವವರು https://rrcb.gov.in/ ವೈಬ್‌ಸೈಟ್ ಕ್ಲಿಕ್ ಮಾಡಿ ಅಪ್ಲಿಕೇಶನ್ ಭರ್ತಿ ಮಾಡಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಶುಲ್ಕವನ್ನು ಪಾವತಿಸಬೇಕು. ಒಂದು ಬಾರಿ ಅರ್ಜಿ ಸಲ್ಲಿಕೆ ಆರಂಭಗೊಂಡ ಬಳಿಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಎರಡು ಹಂತ ಪರೀಕ್ಷೆಯಲ್ಲಿ ತೇರ್ಗಡೆಯಾದ ಸೂಕ್ತ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

error: Content is protected !!
Scroll to Top