ಕೋಲ್ಕತ್ತಾ ವೈದ್ಯೆಯ ಕೇಸ್     ಎಫ್‍ಐಆರ್ ತಡವಾಗಿ ದಾಖಲಿಸಿದ್ದಕ್ಕೆ ಪೊಲೀಸರನ್ನು ತರಾಟೆ ತೆಗೆದುಕೊಂಡ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 20. ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಫ್‍ಐಆರ್ ತಡವಾಗಿ ದಾಖಲಿಸಿದ್ದಕ್ಕೆ ಪಶ್ಚಿಮ ಬಂಗಾಳ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಚಂದ್ರಚೂಡ್, ನ್ಯಾ.ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾ. ಜೆ.ಬಿ ಪರ್ದಿವಾಲಾ ಅವರು ಎಫ್‍ಐಆರ್ ದಾಖಲಿಸಿದವರು ಯಾರು? ಮತ್ತು ಯಾವ ಸಮಯ ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರು ವೈದ್ಯೆಯ ತಂದೆ ದೂರು ನೀಡಿದ್ದಾರೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿದೆ. ಬಳಿಕ ಆಸ್ಪತ್ರೆಯ ವೈಸ್ ಪ್ರಿನ್ಸಿಪಾಲ್ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಿಸುವಾಗ ಸಮಯ ರಾತ್ರಿ 11:45 ಆಗಿತ್ತು ಎಂದು ಹೇಳಿದರು.

Also Read  ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್

 

 

error: Content is protected !!