(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.20. ಸುಳ್ಯ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ದೂಂತುರು ಅವರನ್ನು ಬೆಳ್ಳಾರೆ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಅವರನ್ನು ಸುಳ್ಯ ಠಾಣೆಗೆ ವರ್ಗಾಯಿಸಲಾಗಿದೆ.
ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಖಡಕ್ ಸಬ್ ಇನ್ಸ್‌ಪೆಕ್ಟರ್ ಎಂದೇ ಖ್ಯಾತಿ ಗಳಿಸಿ ಈ ಹಿಂದೆ ಬೆಳ್ಳಾರೆ ಠಾಣಾ ಎಸ್ಐ ಆಗಿದ್ದ ಈರಯ್ಯ ದೂಂತುರು ಅವರು ಬಳಿಕ ಉಪ್ಪಿನಂಗಡಿ, ಸುಳ್ಯ ಠಾಣೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಬೆಳ್ಳಾರೆಗೆ ವರ್ಗಾವಣೆಯಾಗಿದ್ದಾರೆ.