(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ರಿಕ್ಷಾ ಚಾಲಕರ ಸಂಘಟನೆ ಸ್ಥಾಪನೆಯಾಗಿರುವುದೇ ನಮ್ಮ ರಿಕ್ಷಾ ಚಾಲಕರ ಹಿತರಕ್ಷಣೆಗಾಗಿ, ಸಂಘಟನೆ ಈ ಹಿಂದೆಯೂ ರಿಕ್ಷಾ ಚಾಲಕರ ಹಲವು ಸಮಸ್ಯೆಗಳಿಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದೆ ಮುಂದಿನ ದಿನಗಳಲ್ಲೂ ನಮ್ಮವರ ಏಳಿಗೆಗಾಗಿ ನಮ್ಮ ಸಂಘ ಬದ್ದ ಎಂದು ದಕ್ಷಿಣ ಕನ್ನಡ ಟ್ರಿಯೋ ಇ.ವಿ ಕಮಿಟಿ ಅಧ್ಯಕ್ಷ ಶ್ರೀ ಅನಿಲ್ ಸಲ್ದಾನ ಭರವಸ ನೀಡಿದ್ದಾರೆ. ಅವರು ಆಗಸ್ಟ್ 18ರ ಭಾನುವಾರದಂದು ಬಿಜೈ ಸಂತ ಫ್ರಾನ್ಸಿಸ್ ಕ್ಷೇವಿಯರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದ್ ಕುಷ್ಟ್ ನಿವಾರನ್ ಸಂಘ ಹಾಗೂ ಎ.ಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಮತ್ತು ಡೆಂಟಲ್ ಸೈನ್ ಮತ್ತು ಟ್ರಿಯೋ ರಿಕ್ಷಾ ಕಮಿಟಿಗಳ ಜಂಟಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದ ಸಭೆಯ ಅಧ್ಯಕ್ಷತೆ ವಹಿಸಿ ಭಾಷಣದಲ್ಲಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಊಡ್ಸ್ ಶಿಕ್ಷಣ ಸಂಸ್ಥೆಯ ಫಾ. ಜೋನ್ಸನ್ ಸಿಕ್ವೇರಾರವರು ರಕ್ತದಾನದ ಮಹತ್ವವನ್ನು ತಿಳಿಸುತ್ತಾ ಹಲವು ರೀತಿಯ ದಾನಗಳಲ್ಲಿ ಶ್ರೇಷ್ಟವಾದದ್ದು ರಕ್ತದಾನ. ರಕ್ತದಾನದಿಂದ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಬಹುದು. ಮಾನವ ರಕ್ತಕ್ಕೆ ಪರ್‍ಯಾಯವಿಲ್ಲ. ಆಧುನಿಕ ಜೀವನದಿಂದ ಅನಾರೋಗ್ಯದೊಂದಿಗೆ ಹುಟ್ಟುವ ಮಕ್ಕಳು ಸಮಸ್ಯೆಗಳಾಗುತ್ತಾರೆ. ಹಾಗಾಗಿ ಮನುಷ್ಯನ ಆರೋಗ್ಯ ರಕ್ಷಿಸಲು ನಿರಂತರ ಕ್ರಮಬದ್ದ ಆರೋಗ್ಯ ತಪಾಸಣೆ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ಪ್ರಪ್ರಥಮ ರಿಕ್ಷಾ ಚಾಲಕಿ ಶ್ರೀಮತಿ ವನಿತಾ ಸುರೇಶ್, ರಿಕ್ಷಾ ಚಾಲಕ ಸುಭಾಷ್, ಸಂಘದ ವೈದ್ಯಾಧಿಕಾರಿಗಳಾದ ಡಾ. ಪೃಥ್ವಿ ಶೆಟ್ಟಿ ಹಾಗೂ ಡಾ. ಶಿಲ್ಪಾ, ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗದ ಡಾ. ಎಸ್. ಪ್ರವೀಣ್ ಗುಪ್ತಾ ಮತ್ತು ಡಾ. ಸಾಯಿ ಕೃಷ್ಣರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಕಾರ್ಪೊರೇಟರ್ ಲ್ಯಾನ್ಸಿ ಲಾಡ್ ಪಿಂಟೋ, ಕದ್ರಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಸೋಮಶೇಖರ್, ಬಿಜೈ ಚರ್ಚಿನ ಉಪಾಧ್ಯಕ್ಷರು ಅಶೋಕ್ ಪಿಂಟೋ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಮಿತ್ರ ಮಂಡಳಿ ಬಿಜೈ ಕಾರ್ಯದರ್ಶಿ ನವೀನ್ ಚಂದ್ರ, ವ್ಯಾಟ್ ಮೋಟಾರ್‍ಸ ಮತ್ತು ಎನರ್ಜಿಸ್ ಮುಖ್ಯಸ್ಥ ಎಸ್.ಎಲ್ ಪಿಂಟೋ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೂರಾರು ರಿಕ್ಷಾ ಚಾಲಕರು ಮತ್ತು ಅವರ ಕುಟುಂಬ ಶಿಬಿರದಲ್ಲಿ ರಕ್ತದಾನದಲ್ಲಿ ಪಾಲ್ಗೊಂಡಿದ್ದು ಹಲವು ರೀತಿಯ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದರು. ಅಶ್ವಿನ್ ವಂದಿಸಿದರೆ ನಟರಾಜ್ ಅರ್ಥಪೂರ್ಣವಾಗಿ ಕಾರ್ಯಕ್ರಮ ನಿರೂಪಿಸಿದರು.