ಜಿ.ಟಿ.ಟಿ.ಸಿ ಡಿಪ್ಲೋಮಾ ಕೋರ್ಸ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 20. ಮಂಗಳೂರಿನ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ಡಿಪ್ಲೋಮಾ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜನ್ಸ್ ಆಂಡ್ ಮೆಷಿನ್ ಲರ್ನಿಂಗ್ ಡಿಪ್ಲೋಮಾ ಕೋರ್ಸನ್ನು ಪ್ರಾರಂಭಿಸಿದ್ದು ನೇರ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ.

ಕೋರ್ಸ್ ಮುಗಿಸಿದ ಬಳಿಕ ಪ್ರತಿಷ್ಟಿತ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿ.ಸಿ.ಎಸ್. ಮುಂತಾದ ಕಂಪನಿಗಳಲ್ಲಿ 100% ಉದ್ಯೋಗಾವಕಾಶವಿರುತ್ತದೆ. ಹಾಗೆಯೇ ಇತರ ಡಿಪ್ಲೋಮಾ ಕೋರ್ಸ್‍ ಗಳಾದ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಪ್ರಿಸಿಷನ್ ಮಾನ್ಯಫ್ಯಾಕ್ಚರಿಂಗ್ ಗಳಿಗೆ ಪ್ರವೇಶಾತಿ ನಡೆಯುತ್ತಿದೆ.  ಪ್ರತಿಷ್ಟಿತ ಕಂಪನಿಗಳಾದ ಟೊಯೋಟಾ ಕಿರ್ಲೋಸ್ಕರ್, ಹೆಚ್.ಎ.ಎಲ್, ವಿಪ್ರೋ ಕವಾಸಕಿ, ಇಂಡೋ-ಮಿಮ್, ಟಿ.ವಿ.ಎಸ್. ಮುಂತಾದ ಕಂಪನಿಗಳಲ್ಲಿ 100% ಉದ್ಯೋಗಾವಕಾಶವಿರುತ್ತದೆ.

Also Read  ಜಿಲ್ಲೆಯಾದ್ಯಂತ ಜೂ.21 ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಕೋರ್ಸ್‍ಗಳ ಪ್ರವೇಶಾತಿಗೆ SSLC ಪಾಸ್ ಅಥವಾ PUC ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಕೋರ್ಸ್‍ ಗಳು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದ್ದು, 30% ಥಿಯರಿ ಮತ್ತು 70% ಪ್ರಾಕ್ಟಿಕಲ್ ಆಗಿದ್ದು 100% ಉದ್ಯೋಗಾಧಾರಿತ ಕೋರ್ಸ್‍ಗಳಾಗಿರುತ್ತವೆ. ಈ ಕೋರ್ಸ್‍ಗಳನ್ನು ಅಧ್ಯಯನ ಮಾಡುವಾಗ 3 ವರ್ಷದ ಡಿಪ್ಲೋಮಾ ತರಬೇತಿ ನಂತರ ಕಡ್ಡಾಯ ಒಂದು ವರ್ಷದ ಇಂಟರ್ನ್‍ ಶಿಪ್ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ರೂ. 20,000 ವರೆಗೆ ಶಿಷ್ಯವೇತನ ಸಹ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 7ಇ, ಕೈಗಾರಿಕಾ ವಲಯ, ಬೈಕಂಪಾಡಿ, ಮಂಗಳೂರು-575011 ಮೊಬೈಲ್ ನಂ : 9008263660, 0824-2408003, 9481265587, 9741667257, 9483920114. ಸಂಪರ್ಕಿಸುವಂತೆ ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!         

error: Content is protected !!
Scroll to Top