(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 20. ಮೂರು ತಿಂಗಳ ಗರ್ಭಿಣಿಯೋರ್ವಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಯ್ಯಾರ್ ಕನ್ನಟಿಪಾರೆ ಶಾಂತಿಯೋಡು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಶಾಂತಿಯೋಡಿನ ಜನಾರ್ಧನ ಅವರ ಪತ್ನಿ ವಿಜೇತ (32) ಎಂದು ಗುರುತಿಸಲಾಗಿದೆ. ಇವರ ಪತಿ ಜನಾರ್ಧನರವರು ರವಿವಾರದಂದು ಬೆಳಗ್ಗೆ ಉಳ್ಳಾಲದ ಸಂಬಂಧಿಕರ ಮನೆಗೆ ತೆರಳಿದ್ದು, ಈ ಸಂದರ್ಭ ವಿಜೇತಾ ಮಾತ್ರ ಮನೆಯಲ್ಲಿದ್ದರು. ಪತಿ ಸಂಜೆ ಮನೆಗೆ ಬಂದಾಗ ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿದ್ದು, ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕುಂಬಳೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
Also Read ?? ?ig Breaking News ದಕ್ಷಿಣ ಕನ್ನಡದಲ್ಲಿ ಕೊರೋನಾ ರುದ್ರ ತಾಂಡವ ➤ ಇಂದೂ ಓರ್ವರನ್ನು ಬಲಿ ಪಡೆದ ಕೊರೋನಾ