ಸೌಹಾರ್ದತೆ ಆತ್ಮದ ಒಳಗಿನಿಂದಲೇ ಬರಬೇಕಲ್ಲದೆ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿರಬಾರದು: ಯಶವಂತ್ ರೈ ► ನೆಕ್ಕಿತ್ತಡ್ಕ ಮಖಾಂ ಉರೂಸ್ ಪ್ರಯುಕ್ತ ಸೌಹಾರ್ದ ಸಮ್ಮೇಳನ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಸೌಹಾರ್ದತೆ ಆತ್ಮದ ಒಳಗಿನಿಂದಲೇ ಬರಬೇಕಲ್ಲದೆ, ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿರಬಾರದು. ಎಲ್ಲಿ ಶಾಂತಿ ಇದೆಯೋ ಅಲ್ಲಿ ಕ್ರಾಂತಿರಹಿತವಾಗಿ ಸುವ್ಯವಸ್ಥೆಯಿಂದ ಬಾಳಲು ಸಾಧ್ಯ ಎಂದು ಸುಬ್ರಹ್ಮಣ್ಯ ಪ್ರೌಢಶಾಲಾ ಮುಖ್ಯಗುರುಗಳಾದ ಯಶವಂತ್ ರೈ ಹೇಳಿದರು.

ಅವರು ಮರ್ಧಾಳ ತಖ್ವಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮಖಾಂ ವಠಾರದಲ್ಲಿ ನೆಕ್ಕಿತ್ತಡ್ಕ ವಲಿಯುಲ್ಲಾಹಿರವರ ಉರೂಸ್ ಸಮಾರಂಭದ ಅಂಗವಾಗಿ ಮಗ್ರಿಬ್ ನಮಾಜಿನ ನಂತರ ನಡೆದ ಸೌಹಾರ್ದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ನಮ್ಮ ಸೌಹಾರ್ದತೆಯನ್ನು ಕೇವಲ ಭಾಷಣದಲ್ಲಿ ಮಾತ್ರ ಕಾಣದೆ ಜೀವನದಲ್ಲೂ ಅಳವಡಿಸಿಕೊಳ್ಳುವ ಮೂಲಕ ಸೌಹಾರ್ದ ಜೀವನಕ್ಕೆ ಇಲ್ಲಿನ ಉರೂಸ್ ಸಮಾರಂಭವು ಸಾಕ್ಷಿಯಾಗಲಿ ಎಂದರು. ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಾತನಾಡಿ ಧರ್ಮ ಯಾವುದೇ ಇರಲಿ. ಎಲ್ಲಾ ಧರ್ಮವೂ ಶಾಂತಿಯನ್ನೇ ಸಾರುತ್ತದೆ. ಅದರಂತೆ ನಾವೆಲ್ಲರೂ ಒಂದಾಗಿ ಬಾಳೋಣ ಎಂದರು. ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಕೈಕುರೆ, ಫಝಲ್ ಕೋಡಿಂಬಾಳ, ಮರ್ಧಾಳ ಬೀಡಿನ ಅನುಪ್ ಕುಮಾರ್, ಉದ್ಯಮಿ ದಯಾನಂದ ಪ್ರಭು ಮಾತನಾಡಿದರು.

Also Read  ವಿಪರೀತ ಮಳೆಯ ಹಿನ್ನೆಲೆ ➤ ನಾಳೆ (ಆ.04) ಸುಳ್ಯ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಮರ್ಧಾಳ ಜೆ.ಎಂ. ಅಧ್ಯಕ್ಷ ಸಯ್ಯಿದ್ ಕೆ.ಎಸ್. ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಮಾಣಿ ಹಸನ್ ಅಹ್ಸನಿ ಮುಖ್ಯ ಪ್ರಭಾಷಣಗೈದರು. ಇಬ್ರಾಹಿಂ ಮುಸ್ಲಿಯಾರ್ ಚಾಕಟೆಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಕ್ಕಿತ್ತಡ್ಕ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಾಜಿ ಸೈಯದ್ ಮೀರಾ ಸಾಹೇಬ್, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಕೋಟಿ ಚೆನ್ನಯ್ಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಎಸ್.ಎಂ.ಎ ಬೆಳ್ಳಾರೆ ವಲಯಾಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಗ್ರಾ.ಪಂ. ಸದಸ್ಯರಾದ ಎಂ.ಪಿ. ಯೂಸುಫ್, ಹರೀಶ್ ಕೋಡಂದೂರು, ದಾಮೋದರ ಗೌಡ ಡೆಪ್ಪುಣಿ, ಸುಲೈಮಾನ್, ಮರ್ಧಾಳ ಗ್ರಾ.ಪಂ. ಲೆಕ್ಕಪರಿಶೋಧಕ ಭುವನೇಂದ್ರ ಕುಮಾರ್, ಅಶೋಕ್ ರೈ ವಜ್ರಪಾಣಿ, ಸುಂದರ ಗೌಡ ಕರ್ಕೇರ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ಉರೂಸ್ ಕಮಿಟಿ ಕಾರ್ಯದರ್ಶಿ ನವಾಜ್ ಸ್ವಾಗತಿಸಿ, ರಿಯಾಜ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Also Read  ಶಾಸ್ತ್ರೀ ಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ- ಡಾ. ಚೂಂತಾರು

error: Content is protected !!
Scroll to Top