(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯ ಇರುವಂತಹ ಸೇತುವೆಗಳ ಪರಿಶೀಲನೆಗೆ ತಾಂತ್ರಿಕ ತಜ್ಞರ ಸಮಿತಿ ಸೋಮವಾರ ಜಿಲ್ಲೆಗೆ ಆಗಮಿಸಿ ಪರಿಶೀಲಿಸಿತು.
ಪೊಳಲಿ, ಉಳಾಯಿಬೆಟ್ಟು ಮತ್ತು ಬಳ್ಕುಂಜೆಗೆ ಭೇಟಿ ನೀಡಿದ ತಾಂತ್ರಿಕ ತಜ್ಞರು, ಅಲ್ಲಿನ ಸೇತುವೆಗಳನ್ನು ಖುದ್ದು ವೀಕ್ಷಿಸಿತು. ದೋಣಿಯಲ್ಲಿ ತೆರಳಿ ಸೇತುವೆಯ ಅಡಿಭಾಗಕ್ಕೂ ಭೇಟಿ ನೀಡಿ ವೀಕ್ಷಣೆ ನಡೆಸಿತು. ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಸ್ಥಳೀಯರೊಂದಿಗೂ ಮಾಹಿತಿ ಪಡೆಯಿತು. ನಿವೃತ್ತ ಮುಖ್ಯ ಇಂಜಿನಿಯರ್ ಮತ್ತು ಸೇತುವೆ ತಜ್ಞ ಜೈಪ್ರಸಾದ್, ಯೋಜನೆ ಮತ್ತು ರಸ್ತೆ ಆಸ್ತಿ ವ್ಯವಹಾರ ನಿರ್ವಹಣಾ ಕೇಂದ್ರ (PRAMC) ಬೆಂಗಳೂರು ಇದರ ಹಿರಿಯ ಅಧಿಕಾರಿ ಮಹೇಂದ್ರ ಸಮಿತಿಯಲ್ಲಿದ್ದರು. ಮಂಗಳೂರು ವಿಭಾಗ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಅಮರನಾಥ ಜೈನ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಆರ್.ಬಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.