(ನ್ಯೂಸ್ ಕಡಬ) newskadaba.com ಕಡಬ, ಆ. 19. ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಸೋಮವಾರದಂದು ಆಚರಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತೀ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ, ಪ್ರಾಥಮಿಕ ವಿಭಾಗದ ಮೇಲ್ವಿಚಾರಕಿ ಶ್ರೀಮತಿ ಪ್ರಮೀಳಾ ಲೋಕೇಶ್ ವಹಿಸಿ ಪುರಾಣ ಮಹಾಭಾರತ ಇತಿಹಾಸಗಳಲ್ಲಿ ರಕ್ಷಾಬಂಧನ ಆಚರಣೆಯಲ್ಲಿತ್ತು. ಪ್ರಸ್ತುತ ಸಮಾಜದಲ್ಲಿ ಇಂತಹ ರಕ್ಷೆಯನ್ನು ಕಟ್ಟಿ ಸಹೋದರ-ಸಹೋದರಿಯರು ಎಂಬ ಭ್ರಾತೃತ್ವದ ಭಾವವನ್ನು ಮೂಡಿಸಿ ನಮ್ಮ ಹಿಂದೂ ಸಮಾಜದ ರಕ್ಷಣೆಯಲ್ಲಿ ನಾವು ಕೈಜೋಡಿಸುವುದರ ಮೂಲಕ ಭಾರತಮಾತೆಯ ರಕ್ಷಣೆ ಮಾಡೋಣ ಎಂದು ರಕ್ಷಾಬಂಧನ ದಿನದ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿ ಹಾಗೂ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾದ ಕಾರ್ತಿಕ್ ರೈ ಮೈಕಾಜೆ ಹಾಗೂ ಜೀವನ್ ಕುಮಾರ್ ಆಗಮಿಸಿ ಶಿಕ್ಷಕರಿಗೆ ರಕ್ಷೆಯನ್ನು ಕಟ್ಟಿ ಸಿಹಿಯನ್ನು ವಿತರಿಸಿ ಆಶೀರ್ವಾದ ಪಡೆದುಕೊಂಡರು. ವಿದ್ಯಾರ್ಥಿಗಳು ಪರಸ್ಪರ ತಮ್ಮ ಪರಿಚಯವನ್ನು ಮಾಡಿಕೊಂಡು ರಕ್ಷೆಯನ್ನು ಕಟ್ಟಿಕೊಂಡರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಿಕ್ಷಿತಾ 10ನೇ ತರಗತಿ ಸ್ವಾಗತಿಸಿ, ರಶ್ಮಿ 10ನೇ ತರಗತಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಚಂದ್ರಾಕ್ಷಿ ಕೆ ರಕ್ಷಾಬಂಧನದ ಸಂದೇಶವನ್ನು ವಾಚಿಸಿದರು. ಶರಣ್ಯ ಜೆ ಕೆ 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.