(ನ್ಯೂಸ್ ಕಡಬ) newskadaba.c0m ಚೀನಾ, ಆ. 19. ಫಿಲಿಪೈನ್ಸ್ ನೌಕೆಯು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅಪಾಯಕಾರಿ ರೀತಿಯಲ್ಲಿ ಚೀನಾದ ಹಡಗಿನೊಂದಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಚೀನಾದ ಕೋಸ್ಟ್ ಗಾರ್ಡ್ ವರದಿ ತಿಳಿಸಿದೆ.
ಚೀನಾ ಫಿಲಿಪೈನ್ ಮೇಲೆ ಮತ್ತೊಂದು ಆರೋಪ ಮಾಡುತ್ತಿದೆ. ಈ ಕುರಿತು ಚೈನಾ ಕೋಸ್ಟ್ ಗಾರ್ಡ್‌ನ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ವೀಡಿಯೋ ಮೂಲಕ ಸಮರ್ಥಿಸಿಕೊಂಡಿದೆ. ಚೀನಾ ಕೋಸ್ಟ್ ಗಾರ್ಡ್ ವಕ್ತಾರ ಗಾನ್ ಯು ಹೇಳಿಕೆ ನೀಡಿದ ಪ್ರಕಾರ, ಮುಂಜಾನೆ ಎರಡು ಫಿಲಿಪೈನ್ ಕೋಸ್ಟ್ ಗಾರ್ಡ್ ಹಡಗುಗಳು ಸಬೀನಾ ಶೋಲ್ ಪಕ್ಕದ ನೀರಿನಲ್ಲಿ ಅನುಮತಿಯಿಲ್ಲದೆ ಕಾನೂನುಬಾಹಿರವಾಗಿ ಒಳನುಗ್ಗಿದವು.