ಐಫೋನ್‌ ಗಾಗಿ ಯುವಕನೋರ್ವ ಮೂರು ದಿನಗಳ ಉಪವಾಸ             

(ನ್ಯೂಸ್ ಕಡಬ) newskadaba.c0m ದೆಹಲಿ, ಆ. 19.  ಬೆಲೆ ಬಾಳುವ ಐಫೋನ್‌ ಗಾಗಿ ಯುವಕನೋರ್ವ ಮೂರು ದಿನಗಳ ಉಪವಾಸ ಮಾಡಿ ದೇವಸ್ಥಾನದ ಹೊರಗೆ ಹೂ ವ್ಯಾಪಾರ ಮಾಡುವ ತನ್ನ ತಾಯಿಯನ್ನು ಒಪ್ಪಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ‘ಹೂವು ಮಾರಾಟ ಮಾಡುವ ತಾಯಿ ಹಾಗೂ ಆಕೆಯ ಮಗ ಮೊಬೈಲ್ ಖರೀದಿಸಲು ಅಂಗಡಿಗೆ ಬಂದಿದ್ದಾರೆ. ಈ ವೇಳೆ ಆತನ ತಾಯಿ ತಾನು ದೇವಸ್ಥಾನದ ಹೊರಗೆ ಹೂವುಗಳನ್ನು ಮಾರಾಟ ಮಾಡುತ್ತೇನೆ. ಐಪೋನ್ ಗಾಗಿ ತನ್ನ ಮಗ ಮೂರು ದಿನಗಳಿಂದ ಉಪವಾಸವಿದ್ದು ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ವಿವರಿಸಿದ್ದಾರೆ ಎನ್ನಲಾಗಿದೆ.

Also Read  ಮರ್ದಾಳ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ► ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ

 

 

error: Content is protected !!
Scroll to Top