(ನ್ಯೂಸ್ ಕಡಬ) newskadaba.c0mಅಹಮದಾಬಾದ್, ಆ. 19. ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ಪಡೆದಿರುವ 188 ಹಿಂದೂ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಹಮದಾಬಾದ್‌ನಲ್ಲಿಂದು ವಿತರಿಸಿದರು.
ಪೌರತ್ವ ಪ್ರಮಾಣ ಪತ್ರಗಳ ವಿತರಣೆ ಬಳಿಕ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ಧರ್ಮದ ಪೌರತ್ವ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಬದಲಿಗೆ ಈ ಕಾಯ್ದೆಯು ಭಾರತೀಯ ನಿರಾಶ್ರಿತರಿಗೆ ಪೌರತ್ವದ ಜೊತೆಗೆ ಗೌರವ ಮತ್ತು ನ್ಯಾಯವನ್ನು ನೀಡುತ್ತದೆ ಎಂದರು. ಹಿಂದಿನ ಕಾಂಗ್ರೆಸ್ ಸರ್ಕಾರವು ಹಿಂದೂ ಮತ್ತು ಇತರ ಅಲ್ಪಸಂಖ್ಯಾತ ವಲಸಿಗರನ್ನು ಮತ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣಕ್ಕಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಅವರು, ದೇಶಾದ್ಯಂತ ಸಿಎಎ ಅನುಷ್ಠಾನಕ್ಕೆ ಮೋದಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.