ಫರಂಗಿಪೇಟೆ: ಚಾಕುವಿನಿಂದ ಇರಿತ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.22. ಯುವಕರಿಬ್ಬರಿಗೆ ತಂಡವೊಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಫರಂಗಿಪೇಟೆಯಲ್ಲಿ ಬುಧವಾರದಂದು ನಡೆದಿದೆ.

ಗಾಯಾಳುಗಳಲ್ಲಿ ಓರ್ವನನ್ನು ಫರಂಗಿಪೇಟೆ ನಿವಾಸಿ ಇರ್ಫಾನ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಪರಿಚಯ ತಿಳಿದಿಲ್ಲ.
ಫರಂಗಿಪೇಟೆಯ ಒಳಮಾರ್ಗದ ನದಿತಟದಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಚಾಕು ಹಾಗೂ ರಕ್ತಸಿಕ್ತ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಸಾಧ್ಯತೆಯಿದ್ದು, ಘಟನೆಗೆ ಯಾವುದೇ ರಾಜಕೀಯ ಬಣ್ಣಗಳನ್ನು ನೀಡಬಾರದೆಂದು ಪೊಲೀಸ್ ಮೂಲಗಳು ತಿಳಿಸಿವೆ.

Also Read  ಅಜ್ಜಾವರ: ಯಶಸ್ವಿಯಾಗಿ ನಡೆದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ

error: Content is protected !!
Scroll to Top