(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ಪಂಗಡದ ಅಹವಾಲುಗಳನ್ನು ತಿಳಿದುಕೊಳ್ಳಲು ಮುಖಂಡರುಗಳ ಕುಂದು ಕೊರತೆ ಸಭೆಯನ್ನು ಮೂರು ತಿಂಗಳಿಗೊಮ್ಮೆ ಆಯೋಜಿಸಲಾಗುತ್ತದೆ.
ಸದರಿ ಸಭೆಗೆ ಕರೆಯೋಲೆ ನೀಡಲು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ನೋಂದಣಿಯಾದ ಪರಿಶಿಷ್ಟ ಜಾತಿ/ ಪಂಗಡದ ಸಂಘಟನೆಗಳ ನೋಂದಣಿ ಪ್ರತಿಯೊಂದಿಗೆ ಸಂಘದ ವಿಳಾಸವನ್ನು ನಗರ, ಬಡತನ ನಿರ್ಮೂಲನಾ ಕೋಶಕ್ಕೆ ಸಲ್ಲಿಸುವಂತೆ ಮಂಗಳೂರು ಮಹಾನಗರಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.