ಕಾನೂನು ಬದಲಾವಣೆಗೆ ಆಗ್ರಹ..!        ನಟ ಶೈನ್ ಶೆಟ್ಟಿ ಆಕ್ರೋಶ..!       

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 17.  ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಂತಹ ವೈದ್ಯೆಯ ಅತ್ಯಾಚಾರ ಕೊಲೆ ವಿಚಾರಕ್ಕೆ ದೇಶವೇ ಆಕ್ರೋಶಗೊಂಡಿದೆ. ಇದೀಗ ಇದೇ ವಿಚಾರವಾಗಿ ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ನಟ ಕಾನೂನು ಬದಲಾವಣೆಗೆ ಆಗ್ರಹಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದೊಂದು ನೋಟ್ ಬರೆದು ಶೈನ್ ಶೆಟ್ಟಿ ಬದಲಾಗಲೇಬೇಕು ಕಾನೂನು ಎಂದು ಕೇಳಿಕೊಂಡಿದ್ದಾರೆ. ಶಾಸನಾತ್ಮಕ ತಿದ್ದುಪಡಿಯ ಮೂಲಕ ಮತ್ತು ಸಾಂವಿಧಾನಿಕ ಸವಾಲಿನ ಮೂಲಕ ಎರಡು ರೀತಿಯಲ್ಲಿ ಭಾರತದಲ್ಲಿನ ಕಾನೂನುಗಳನ್ನು ಬದಲಾಯಿಸಬಹುದು ಮತ್ತು ಭಾರತದ ಸಂಸತ್ತು ಮತ್ತು ಅಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಅದನ್ನ ಬದಲಾಯಿಸಬೇಕು ಎಂದು ಹೇಳಿದ್ದಾರೆ.

Also Read  ಅಪಘಾತದಲ್ಲಿ ಯುವತಿ ಮೃತ್ಯು; ಪ್ರಕರಣಕ್ಕೆ ತಿರುವು !!!

error: Content is protected !!
Scroll to Top