ಕೋರಿಯಾರ್: ಕುಮಾರಧಾರಾ ನದಿಗೆ ಬಿದ್ದು ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.21. ಕುಮಾರಧಾರಾ ನದಿಯ ಕೋರಿಯಾರ್ ಸಮೀಪದ ಸಂಪದಕಲ್ಲು ಎಂಬಲ್ಲಿ ವ್ಯಕ್ತಿಯೋರ್ವರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರದಂದು ಬೆಳಕಿಗೆ ಬಂದಿದೆ.







ಮೃತರನ್ನು ಬಳ್ಪ ಗ್ರಾಮದ ಕಟ್ಟ ನಿವಾಸಿ ಈಶ್ವರ ಗೌಡ(47) ಎಂದು ಗುರುತಿಸಲಾಗಿದೆ. ಇವರು ಸೋಮವಾರದಂದು ಬೆಳಿಗ್ಗೆ ಸೊಪ್ಪು ತರಲೆಂದು ಕುಮಾರಧಾರಾ ನದಿ ತಟಕ್ಕೆ ತೆರಳಿದ್ದು, ಬಳಿಕ ಕಣ್ಮರೆಯಾಗಿದ್ದರು. ಮನೆಯವರು ಪರಿಸರದಲ್ಲೆಡೆ ಹುಡುಕಾಡಿದ್ದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ‌. ಬುಧವಾರದಂದು ಬೆಳಿಗ್ಗೆ ಮೃತದೇಹವು ನದಿಯಲ್ಲಿ ಕಂಡುಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top