ಆಂಧ್ರ ಪ್ರದೇಶದಲ್ಲಿ ಬಡವರಿಗೆ 5ರೂ.ಗೆ ಅನ್ನ ನೀಡುವ ಕ್ಯಾಂಟೀನ್ ಪುನರಾರಂಭ

(ನ್ಯೂಸ್ ಕಡಬ) newskadaba.c0m ಅಮರಾವತಿ, ಆ. 17.  ಆಂಧ್ರಪ್ರದೇಶದಲ್ಲಿ ಮತ್ತೆ ಅನ್ನ ಕ್ಯಾಂಟೀನ್‌ಗಳು ಪುನರಾರಂಭ ಆಗಿದ್ದು, ಬಡವರಿಗೆ 5 ರೂ.ಗೆ ಅನ್ನ ನೀಡುವ ಅನ್ನ ಕ್ಯಾಂಟೀನ್‌ಗಳು ಪುನಾರಂಭ ಆಗಿವೆ.

ವೈಎಸ್‌ಆರ್‌ಸಿಪಿ ಸರ್ಕಾರವು 2019 ಮತ್ತು 2024 ರ ನಡುವೆ ಟಿಡಿಪಿಯ ಹಿಂದಿನ ಆಡಳಿತದಲ್ಲಿ ಪ್ರಾರಂಭಿಸಲಾದ ಕ್ಯಾಂಟೀನ್‌ಗಳನ್ನು ಸ್ಥಗಿತಗೊಳಿಸಿತ್ತು. ಮತ್ತೆ ಅಧಿಕಾರದಲ್ಲಿರುವ ಟಿಡಿಪಿ ಈ ಕ್ಯಾಂಟೀನ್‌ಗಳನ್ನು ಮತ್ತೆ ಆರಂಭಿಸಿವೆ ಎನ್ನಲಾಗಿದೆ.ಬಡವರು ಹಸಿವಿನಿಂದ ಬಳಲಬಾರದು ಎಂಬುದು ಈ ಕ್ಯಾಂಟೀನ್‌ಗಳ ಮುಖ್ಯ ಉದ್ದೇಶವಾಗಿದೆ ಎಂದು ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್‌ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

Also Read  ಐದು ತಿಂಗಳ ಮಗುವಿನ ಕೈ ಕಾಲು ಮುರಿದ ತಂದೆ       ➤  ಆರೋಪಿ ಪತ್ರಕರ್ತ ಅಂದರ್​

error: Content is protected !!
Scroll to Top