ಬಂಟ್ವಾಳ: ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ      ಕರ್ನಾಟಕ ಬ್ಯಾಂಕ್ ಕಚೇರಿಯಿಂದ ಶಾಲಾ ವಾಹನ ಕೊಡುಗೆ               

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 17.  78 ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ತಮ್ಮ ಸಾಮಾಜಿಕ ಅಭಿವೃದ್ಧಿ ನಿಧಿಯಿಂದ ಲೊರೆಟ್ಟೊ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಬಂಟ್ವಾಳ ಇವರಿಗೆ ಶಾಲಾ ವಾಹನವನ್ನು ಕೊಡುಗೆಯಾಗಿ ನೀಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಂಗಳೂರಿನ ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಇಓ ಹಾಗೂ ಪ್ರಧಾನ ಆಡಳಿತ ನಿರ್ದೇಶಕರು ಆಗಿರುವ ಶ್ರೀ ಕೃಷ್ಣನ್ ಹರಿಹರ ಶರ್ಮ ಧ್ವಜಾರೋಹನ ನೆರವೇರಿಸಿದರು. ಸಾಮಾಜಿಕ ಅಭಿವೃದ್ಧಿ ನಿಧಿಯಿಂದ ನೀಡುವ ಐವತ್ತು ವಾಹನಗಳನ್ನು ವಿವಿಧ ಶಾಲಾ ಕಾಲೇಜುಗಳಿಗೆ ನೀಡಿ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿ ಬದುಕನ್ನು ನಡೆಸಲು ಹಾಗೂ ಮಕ್ಕಳಲ್ಲಿ ಶಿಕ್ಷಣ ಸ್ವಾತಂತ್ರ್ಯವನ್ನು ರೂಪಿಸಲು ಕರ್ನಾಟಕ ಬ್ಯಾಂಕಿನ ಕೊಡುಗೆಯನ್ನು ವಿವರಿಸಿದರು.

Also Read  25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯದ ವ್ಯಕ್ತಿ

error: Content is protected !!
Scroll to Top