ಅಡಿಕೆ, ಕಾಳುಮೆಣಸು ಬೆಳೆ ವಿಮೆ ಯೋಜನೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 17. ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿ ಕೊಡುವ ನಿಟ್ಟಿನಲ್ಲಿ 2024-25ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಗಳಿಗೆ ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು ಜಿಲ್ಲೆಯ ಅಡಿಕೆ,ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದೆ. ಈ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆದಿರುವ ರೈತರಿಗೆ ಮಾತ್ರ ಅನ್ವಯಿಸುವಂತೆ ನೋಂದಾವಣಿಗೊಳಿಸಲು ಆಗಸ್ಟ್ 2 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಬೆಳೆ ಸಾಲ ಹೊಂದಿದ್ದು, ಈವರೆಗೆ ಯೋಜನೆಯಡಿ ನೋಂದಾವಣೆಗೊಳ್ಳದ ರೈತರು ತುರ್ತಾಗಿ ಸದರಿ ಯೋಜನೆ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸದರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ TATA AIG ಸಂಸ್ಥೆ ಆಯ್ಕೆಯಾಗಿದೆ.

Also Read  ಮನೆಗೆ ಆಕಸ್ಮಿಕ ಬೆಂಕಿ ; ಲಕ್ಷಾಂತರ ರೂ. ನಷ್ಟ

ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಪ್ರತಿನಿಧಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು ವಿವರ ಇಂತಿದೆ: ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು ಮಂಜುನಾಥ ಡಿ., ಮೊಬೈಲ್ ಸಂಖ್ಯೆ: 9448999226, ಮಂಗಳೂರು ಜಿ. ಪಂ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರವೀಣ ಕೆ., ಮೊಬೈಲ್ ಸಂಖ್ಯೆ: 9449258204, ಬಂಟ್ವಾಳ ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರದೀಪ್ ಡಿಸೋಜಾ, ಮೊಬೈಲ್ ಸಂಖ್ಯೆ:9448206393. ಪುತ್ತೂರು ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರೇಖಾ ಎ., ಮೊಬೈಲ್ ಸಂಖ್ಯೆ 9731854527, ಸುಳ್ಯ ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಸುಹಾನ ಪಿ.ಕೆ., ಮೊಬೈಲ್ ಸಂಖ್ಯೆ: 9880993238, ಬೆಳ್ತಂಗಡಿ ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಚಂದ್ರಶೇಖರ ಕೆ.ಎಸ್., ಮೊಬೈಲ್ ಸಂಖ್ಯೆ: 9448336863 ಹಾಗೂ ಟಾಟಾ ಎಐಜಿ ಸಂಸ್ಥೆಯ ಪ್ರತಿನಿಧಿ ಶುಭಂ, ಮೊಬೈಲ್ ಸಂಖ್ಯೆ: 9131962255 ಸಂಪರ್ಕಿಸುವಂತೆ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top