ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕಾಂತಾರ ಅಭಿನಯಕ್ಕಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 16. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದ್ದು ಸೂಪರ್‌ ಹಿಟ್‌ ಚಿತ್ರ ʼಕಾಂತಾರʼದಲ್ಲಿನ ನಟನೆಗಾಗಿ ರಿಷಬ್‌ ಶೆಟ್ಟಿ ಅವರನ್ನು ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಟ ಯಶ್‌ ಅಭಿನಯದ ʼಕೆಜಿಎಫ್‌ ಚಾಪ್ಟರ್‌ 2ʼ ಸಿನಿಮಾಗೆ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಸಿಕ್ಕಿದೆ. ಅಲ್ಲದೇ ಅದೇ ಚಿತ್ರವು ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನೂ ಪಡೆದಿದೆ. ಅತ್ಯುತ್ತಮ ನಟಿ ಪ್ರಶಸ್ತಿ ನಿತ್ಯ ಮೆನನ್‌ ಹಾಗೂ ಮಾನಸಿ ಪರೇಖ್‌ ಅವರು ಪಡೆದುಕೊಂಡಿದ್ದಾರೆ. ಹಿಂದಿ ಚಿತ್ರ ʼಉಂಚೈʼ ನಿರ್ದೇಶನಕ್ಕಾಗಿ ಸೂರಜ್‌ ಬರ್ಜಾತ್ಯ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಅರ್ಜಿತ್‌ ಸಿಂಗ್‌ ಪಾಲಾದರೆ, ಬಾಂಬೆ ಜಯಶ್ರೀ ಅವರಿಗೆ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಲಭಿಸಿದೆ. ಪೊನ್ನಿಯಿನ್ ಸೆಲ್ವನ್ 2 ಗಾಗಿ ಎ.ಆರ್. ರೆಹಮಾನ್ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಪಡೆದಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಬಸ್ ➤ 39 ಮಂದಿ ಮೃತ್ಯು

 

error: Content is protected !!
Scroll to Top