ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ..!                  ಅಪ್ರಾಪ್ತ ಬಾಲಕರು ಆರೆಸ್ಟ್..!                           

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 16.  ಲಾಲ್‌ಬಾಗ್ ನ ಸಿದ್ದಯ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಯುವತಿಯ ವಿಡಿಯೋ ಸೆರೆ ಹಿಡಿದಿದ್ದ ಹದಿನಾಲ್ಕು ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.

ವಿಜಯ್ ಅಭಿನಯದ ಭೀಮ ಚಿತ್ರ ಪ್ರದರ್ಶನದ ವೇಳೆ ರಾತ್ರಿ 11.30ರ ಸುಮಾರಿಗೆ  ಘಟನೆ ನಡೆದಿದೆ. ಮಧ್ಯಂತರ ವಿರಾಮದ ವೇಳೆ ಶೌಚಗೃಹ ಬಳಸಲು ಬಂದ 23 ವರ್ಷದ ಯುವತಿ ವಾಶ್‌ರೂಮ್ ನಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋಗಳನ್ನು ರೆಕಾರ್ಡ್ ಮಾಡುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

Also Read  ಮಂಗಳೂರು ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ

 

error: Content is protected !!