(ನ್ಯೂಸ್ ಕಡಬ) newskadaba.com ತಾವರಗೇರಾ, ಆ. 16. ಧ್ವಜಸ್ತಂಭದ ಮೇಲಿಂದ ಬಿದ್ದು ಮೂರನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಳಮಳ್ಳಿ ತಾಂಡಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಪ್ರಕಾಶ (9) ಎಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಶಿಕ್ಷಕರು ಶಾಲೆಯ ಗೇಟ್ ಹಾಕಿ ತೆರಳಿದ್ದರು. ಬಳಿಕ ವಿದ್ಯಾರ್ಥಿಯು ಸ್ಥಳೀಯ ಬಾಲಕರೊಂದಿಗೆ ಕಾಂಪೌಂಡ್ ಹಾರಿ ಆಟವಾಡಲು ಶಾಲೆಯ ಮೈದಾನಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ,. ಮೃತ ವಿದ್ಯಾರ್ಥಿಯ ತಂದೆ- ತಾಯಿ ಸವಿತಾ ದಂಪತಿಗಳು ಹಾಸನಕ್ಕೆ ಕೂಲಿ ಅರಸಿಕೊಂಡು ಗುಳೆ ಹೋಗಿದ್ದು, ಮೃತ ವಿದ್ಯಾರ್ಥಿಯು ಅಜ್ಜಿಯೊಂದಿಗೆ ತಾಂಡದಲ್ಲಿ ವಾಸವಾಗಿರುವುದಾಗಿ ತಿಳಿದುಬಂದಿದೆ.