ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಏರಿಕೆ..!           ನಿಯಂತ್ರಣಕ್ಕೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 16.  ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ  ಏರಿಕೆಯಾಗುತ್ತಿದ್ದು, ಶಾಲೆಗಳಲ್ಲಿ ಮುಂಜಾಗ್ರತೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಕಡ್ಡಾಯವಾಗಿ ಡಿಡಿಪಿಐಗಳು, ಬಿಇಓಗಳು ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಇದರಂತೆ ವಿದ್ಯಾರ್ಥಿಗಳು ಕೈ ಕಾಲು ಮುಚ್ಚುವಂತಹ ಸಮವಸ್ತ್ರ, ಬಟ್ಟೆಗಳನ್ನು ಧರಿಸುವುದು ಮತ್ತು ಶಾಲೆಗೆ ಬರುವ ಮುನ್ನ Mosquito Repellent ಗಳನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳುವಂತೆ ಸೂಚಿಸಿದ್ದಾರೆ. ಡೆಂಗ್ಯೂ ನಿಯಂತ್ರಣ ಕ್ರಮದ ಕುರಿತು Do’s & Don’t’s ಶಾಲೆಯ ಶಾಲಾ ಕೊಠಡಿಯ ನೋಟಿಸ್ ಬೋರ್ಡ್ ಗಳಲ್ಲಿ ಪ್ರದರ್ಶಿಸುವುದಾಗಿ ಹೇಳಿದ್ದಾರೆ.                                                                            

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತಾಧಿಕಾರಿಯಾಗಿ ಡಾ.ಯತೀಶ್ ಉಳ್ಳಾಲ್

 

error: Content is protected !!
Scroll to Top