ವಯನಾಡು ದುರಂತ..!     ದಾಖಲೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಹೊಸ ಯೋಜನೆ ಜಾರಿಗೆ     

(ನ್ಯೂಸ್ ಕಡಬ) newskadaba.c0m ವಯನಾಡು, ಆ. 16.  ನೆನೆದಷ್ಟು ಭಯಭೀತಗೊಳಿಸುವ ವಯನಾಡು ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ದುರಂತದಿಂದಾಗಿ ಅದೆಷ್ಟೋ ಜನ ಕುಟುಂಬ, ಮನೆ ಸರ್ವಸ್ವವನ್ನೂ ಕಳೆದುಕೊಂಡಿದ್ದು, ತಮ್ಮ ಆಸ್ತಿಪಾಸ್ತಿ ಕಳೆದುಕೊಂಡು ದಾಖಲೆಗಳು ಕೂಡಾ ನಷ್ಟವಾಗಿದೆ. ಅಂತಹವರಿಗಾಗಿ ಹೈಕೋರ್ಟ್ ಹೊಸ ನಿಯಮ ಜಾರಿಗೆ ತರಲಿದೆ ಎನ್ನಲಾಗಿದೆ.

ಭೂಕುಸಿತಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಹೈಕೋರ್ಟ್ ಪರಿಗಣಿಸಲಿದೆ. ನ್ಯಾಯಮೂರ್ತಿ ಜಯಶಂಕರನ್ ನಂಬಿಯಾರ್, ನ್ಯಾಯಮೂರ್ತಿ ವಿಎಂ ಶ್ಯಾಮ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಅನೇಕ ಬೇಡಿಕೆಗಳ ಅರ್ಜಿಯನ್ನು ನ್ಯಾಯಾಲಯ ಇಂದು ಪರಿಗಣಿಸಲಿದೆ ಎಂದು ವರದಿ ತಿಳಿಸಿದೆ.

Also Read  ನೆಲ್ಯಾಡಿ: ಶತಾಯುಷಿ ಯೂಸುಫ್ ಕೆ.ಇ ವಿಧಿವಶ

 

error: Content is protected !!
Scroll to Top