ಅತ್ಯಾಚಾರವೆಸಗಿ ವೈದ್ಯೆಯ ಕೊಲೆ ನಾಳೆ ರಾಷ್ಟ್ರವ್ಯಾಪಿ OPD, ಶಸ್ತ್ರಚಿಕಿತ್ಸೆ ಬಂದ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 16. ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತರಾಗಿದ್ದ ಮಹಿಳಾ ವೈದ್ಯೆಯ ಹತ್ಯೆ ಹಾಗೂ ಆಸ್ಪತ್ರೆ ಧ್ವಂಸ ಮಾಡಿದ ಆರೋಪದ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘವು ನಾಳೆ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ಸೇವೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಈ ಸಂದರ್ಭ ಅಗತ್ಯ ಸೇವೆಗಳನ್ನು ನಿರ್ವಹಿಸಲಾಗುವುದು ಮತ್ತು ಅಪಘಾತದ ವಾರ್ಡ್ ಗಳು ಕಾರ್ಯನಿರ್ವಹಿಸಲಿವೆ ಎಂದು ವೈದ್ಯಕೀಯ ಸಂಸ್ಥೆ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಹೊರರೋಗಿ ವಿಭಾಗಗಳು (ಒಪಿಡಿ) ಕಾರ್ಯನಿರ್ವಹಿಸುವುದಿಲ್ಲ ಮತ್ತು ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ. ಆಧುನಿಕ ಔಷಧ ವೈದ್ಯರು ಸೇವೆಗಳನ್ನು ಒದಗಿಸುವ ಎಲ್ಲ ಕ್ಷೇತ್ರಗಳಲ್ಲಿ ಹಿಂಪಡೆಯುವಿಕೆ ಇದೆ ಎಂದು ಹೇಳಿದೆ.

Also Read  ಮಂಗಳೂರು - ಬೆಂಗಳೂರು ರೈಲು ಸಂಚಾರ ಬಂದ್ ➤ ರೈಲುಮಾರ್ಗ ಕಾಮಗಾರಿ ಹಿನ್ನೆಲೆ

 

ಕೋಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕ್ರೂರ ಅಪರಾಧ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು (ಬುಧವಾರ ರಾತ್ರಿ) ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ನಂತರ, ಭಾರತೀಯ ವೈದ್ಯಕೀಯ ಸಂಘವು ದೇಶಾದ್ಯಂತ ಆಧುನಿಕ ವೈದ್ಯಕೀಯ ವೈದ್ಯರ ಸೇವೆಗಳನ್ನು ಬೆಳಿಗ್ಗೆ 6 ಗಂಟೆಯಿಂದ ಹಿಂತೆಗೆದುಕೊಳ್ಳುತ್ತದೆ ಎಂದು ಘೋಷಿಸಿತ್ತು.

ವೈದ್ಯರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ವತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಆಸ್ಪತ್ರೆ ಮತ್ತು ಕ್ಯಾಂಪಸ್ ಗಳಲ್ಲಿ ವೈದ್ಯರ ಸುರಕ್ಷತೆಯನ್ನು ಅಧಿಕಾರಿಗಳು ಒದಗಿಸಬೇಕು. ದೈಹಿಕ ಹಲ್ಲೆ ಮತ್ತು ಅಪರಾಧಗಳು ಎರಡೂ ಸಂಬಂಧಿತ ಅಧಿಕಾರಿಗಳ ಅಸಡ್ಡೆಯ ಪರಿಣಾಮವಾಗಿದೆ ಎಂದು ಅದು ಹೇಳಿದೆ.

error: Content is protected !!
Scroll to Top