(ನ್ಯೂಸ್ ಕಡಬ) newskadaba.com ನವದೆಹಲಿ, ಆ. 16.ಇಂಡಿಗೋ ವಿಮಾನಯಾನ ಸಂಸ್ಥೆಯು 1,000 ಮಹಿಳಾ ಪೈಲಟ್ಗಳನ್ನು ನೇಮಿಸಿಕೊಳ್ಳುವ ಮೂಲಕ 2025ರ ಸಮಯಕ್ಕೆ, ತಮ್ಮ ಸಮಸ್ಥೆಯಲ್ಲಿನ ಎಲ್ಲಾ ಸ್ತರಗಳಲ್ಲಿಯೂ ಹೆಚ್ಚೆಚ್ಚು ಮಹಿಳಾ ಉದ್ಯೋಗಿಗಳನ್ನ ಮುನ್ನೆಲೆಗೆ ತರುವ ಸಲುವಾಗಿ ತಮ್ಮ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಪ್ರಸ್ತುತ ಇಂಡಿಗೋ ವಿಮಾನಯಾನ ಸಂಸ್ಥೆಯು 800 ಮಹಿಳಾ ಪೈಲಟ್‌ಗಳನ್ನು ನೇಮಿಸಿಕೊಂಡಿದೆ. ಇಂಜಿನಿಯರಿಂಗ್ ಮತ್ತು ಫ್ಲೈಯಿಂಗ್ ಸಿಬ್ಬಂದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನ ಉತ್ತೇಜಿಸಲು ಇಂಡಿಗೋ ಯೋಜನೆ ರೂಪಿಸಿರುವುದಾಗಿ ಇಂಡಿಗೋ ಗ್ರೂಪ್ ಮುಖ್ಯ ಅಧಿಕಾರಿ ಸುಖಜಿತ್ ಎಸ್ ಪಾಸ್ರಿಚಾ ಹೇಳಿರುವುದಾಗಿ ವರದಿ ತಿಳಿಸಿದೆ.