ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಮೊದಲ ಯತ್ನ ವಿಫಲ         ತಜ್ಞರ ಎರಡನೇ ಪ್ಲಾನ್ ಸಿದ್ಧತೆ       

(ನ್ಯೂಸ್ ಕಡಬ) newskadaba.c0m ಬಳ್ಳಾರಿ, ಆ. 16.  ತುಂಗಭದ್ರಾ ಡ್ಯಾಂನ 19ನೇ ತೂಬಿನಲ್ಲಿ ಗೇಟ್ ಅಳವಡಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ತಜ್ಞರು ಎರಡನೇ ಪ್ಲಾನ್ ಮಾಡಿಕೊಂಡಿದ್ದು, ಗೇಟ್ ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ ಎನ್ನಲಾಗಿದೆ.

ಜಿಂದಾಲ್ ಕಂಪನಿಯ ಗೇಟ್ ಎಲಿಮೆಂಟ್‌ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್‌ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಗುರುವಾರ ರಾತ್ರಿ ಜಿಂದಾಲ್ ಕಂಪನಿಯ ಮತ್ತೊಂದು ಗೇಟ್ ಅಣೆಕಟ್ಟು ಪ್ರದೇಶಕ್ಕೆ ಬಂದಿದ್ದು, ಇದರೊಂದಿಗೆ ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಮತ್ತೊಂದು ಗೇಟ್ ಕೂಡ ತರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು: ಚೆಕ್ ಅಮಾನ್ಯ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

 

error: Content is protected !!
Scroll to Top