(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 16. ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣಗೈದು ಮಾತನಾಡಿದ ಕಾರ್ಯಕ್ರಮದ ಸಭಾಧ್ಯಕ್ಷರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಝೀಝ್ ಬಿ.ಕೆ ವಿವಿಧತೆಯಲ್ಲಿ ಏಕತೆ ಸಾರುವ ಭರತ ಭೂಮಿಯನ್ನು ಪ್ರೀತಿಸುವ ಮತ್ತು ಪ್ರಾಣತೆತ್ತುವ ವೀರ ಯೋಧರಂತೆ ನಾವೆಲ್ಲರೂ ನಮ್ಮ ದೇಶದ ಹಿತಕ್ಕಾಗಿ ಅರ್ಪಿತರಾಗಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಹೋರಾಟಗಾರರಿಗೆ ನಮನ ಸಲ್ಲಿಸುವ ಮೂಲಕ ಅವರ ತ್ಯಾಗವನ್ನು ಸ್ಮರಿಸಿದರು. ಕಾರ್ಯಕ್ರಮವನ್ನು ಸ್ವಾಗತಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಶ್ರೀ ಎಮ್, ಸ್ವಾತಂತ್ರ್ಯ ಸಂಗ್ರಾಮದ ಪರಿಚಯ ಮತ್ತು ಆಧುನಿಕ ಜಗತ್ತಿನಲ್ಲಿ ನಮ್ಮ ಭಾಧ್ಯತೆಗಳ ಬಗ್ಗೆ ಅರಿವು ಮೂಡಿಸಿದರು. ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಿವೃತ್ತ ಶಿಕ್ಷಕ ಶ್ರೀಯುತ ಕುಶಾಲಪ್ಪ ಮತ್ತು ಕೆಮ್ಮಾರ ಮಸೀದಿ ಧರ್ಮಗುರುಗಳಾದ ಎನ್.ಎಂ ಶರೀಫ್ ಸಖಾಫಿಯವರು ಸ್ವಾತಂತ್ರ್ಯದ ಸಂದೇಶ ಭಾಷಣಗೈದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ನಂದನಾ ಪಿ.ಶೆಟ್ಟಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಹೇಮಂತ್ ಮೈತಳಿಕೆ, ಶ್ರೀಮತಿ ವಾರಿಜಾಕ್ಷಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ತೇಜಾವತಿ, ಹಿರಿಯ ವಿಧ್ಯಾರ್ಥಿ ಸಂಘದ ಕಾರ್ಯದರ್ಶಿ ಜುನೈದ್ ಕೆಮ್ಮಾರ, ಗಣ್ಯರಾದ ಎ.ಎಸ್.ಐ ಶ್ರೀಯುತ ಕನಕರಾಜ್ ಕಡಬ ಠಾಣೆ, ರಾಮಣ್ಣ ಬಡ್ಡಮೆ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೆಲಿಕತ್, ಹಂಝ ಬಡ್ಡಮೆ ಮತ್ತು ಇಬ್ರಾಹಿಂ ಆಕಿರೆ, ಎಸ್.ಡಿ.ಎಂ.ಸಿ ಸದಸ್ಯರಾದ ಪದ್ಮನಾಭ ಶೆಟ್ಟಿ, ವಾಮನ ಬರಮೇಲು, ಯು.ಟಿ ಶರೀಫ್, ಖಾದರ್ ಅಡೆಕ್ಕಲ್, ಶ್ರೀಮತಿ ಯೋಗಿತಾ, ಶ್ರೀಮತಿ ಜಮೀಲಾ, ಅಧ್ಯಾಪಕ ವೃಂದದವರು, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಸಂಧ್ಯಾ ಮತ್ತು ಶ್ರೀಮತಿ ಲೀನಾ ಲೆಸ್ರಾಡೊ ನಿರೂಪಿಸಿದರು. ಶ್ರೀಮತಿ ಮೋಹನಾಂಗಿ, ಶ್ರೀಮತಿ ಮೆಹನಾಝ್ ಹಾಗೂ ಶ್ರೀಯುತ ವೆಂಕಟರಮಣ ಭಟ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಸುಮನಾ ಕೆ.ಎಸ್ ಧನ್ಯವಾದಗೈದರು.