(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಆ. 15. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯು ಖಾಲಿಯಿರುವ ನೂರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಹೆಸ್ಕಾಂ ಒಟ್ಟು 338 ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಆಗಸ್ಟ್ 20ರಂದು ಕೊನೆ ದಿನವಾಗಿದೆ. ನೀವು ಡಿಪ್ಲೊಮಾ ಇಲ್ಲವೇ ಎಂಜಿನಿಯರಿಂಗ್ ಮಾಡಿದ್ದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಿ ಹುದ್ದೆ ಪಡೆಯಬಹುದಾಗಿದೆ ಎಂದು ಬೆಸ್ಕಾಂ ತಿಳಿಸಿದೆ
ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ
ನೇಮಕಾತಿ ಸಂಸ್ಥೆ: ಬೆಸ್ಕಾಂ
ಹುದ್ದೆ ಹೆಸರು : ಅಪ್ರೆಂಟಿಸ್ ಟ್ರೈನಿಂಗ್
ಒಟ್ಟು ಹುದ್ದೆಗಳು: 338
ಡಿಪ್ಲೊಮಾ ಅಪ್ರೆಂಟಿಸ್: 138
ಗ್ರಾಜುಯೇಟ್ ಅಪ್ರೆಂಟಿಸ್: 200
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಆಗಸ್ಟ್ 20
ಪೋಸ್ಟಿಂಗ್ ಸ್ಥಳಃ ಹುಬ್ಬಳ್ಳಿ
ಶೈಕ್ಷಣಿಕ ಅರ್ಹತೆ ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್ ನಲ್ಲಿ ಪದವಿ ಪಡೆದಿರಬೇಕು. ಇನ್ನೂ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕುವವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು ಎಂದು ಬೆಸ್ಕಾಂ ಅಧಿಸೂಚನೆ ಮಾಹಿತಿ ನೀಡಿದೆ.
ವಯೋಮಿತಿ ಮಾಹಿತಿ- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯಸ್ಸಿನ ಮಿತಿ ಇದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಬೆಸ್ಕಾಂ ಹೇಳಿದೆ.
ಅಭ್ಯರ್ಥಿಗಳ ಆಯ್ಕೆ- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಪಡೆದ ಅಂಕಗಳ (ಮೆರಿಟ್ ಲಿಸ್ಟ್) ಆಧಾರದಲ್ಲಿ ಹಾಗೂ ದಾಖಲಾತಿ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆದ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಯವರಿಗೆ ಮಾಸಿಕ 9000 ರೂ. ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಗೆ ಆಯ್ಕೆ ಆದವರಿಗೆ ಮಾಸಿಕ 8000 ರೂ. ವೇತನ ಸಹಿತ ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಹುದ್ದೆಗಳ ನೇಮಕಾತಿ ಅವಧಿ– ಈ ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳನ್ನು ಆಗಸ್ಟ್ /ಸೆಪ್ಟೆಂಬರ್ 2024ರಿಂದ 1 ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಉದ್ಯೋಗದ ಸಮಯ ಮಿತಿಯನ್ನು ತಿಳಿಸಲಾಗಿದೆ. ಆಸಕ್ತರು ಇದನ್ನು ಗಮನಿಸಿ ಅರ್ಜಿ ಸಲ್ಲಿಸಬೇಕು.
ಮೆರಿಟ್‌ನಲ್ಲಿ ಆಯ್ಕೆ ಆಗಿ ಶಾರ್ಟ್ ಲಿಸ್ಟ್ ಆದವರಿಗಾಗಿ ಸೆಪ್ಟೆಂಬರ್ 9ರಂದು ”ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ, ಐಟಿಸಿ, ಹೆಸ್ಕಾಂ, ಕಾರವಾರ ರಸ್ತೆ, ವಿದ್ಯುತ್ ನಗರ, ಹುಬ್ಬಳ್ಳಿ” ಇಲ್ಲಿ ನಡೆಯಲಿರುವ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು. ಅದಕ್ಕಾಗಿ ಇಲ್ಲಿರುವ ಬೆಸ್ಕಾಂ ಅಧಿಕೃತ ಲಿಂಕ್ (https://bescom.karnataka.gov.in/new-page/Apprenticeship%20Training%20for%20the%20FY%202023-24/en) ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲ್ಲಿನ ಅಧಿಸೂಚನೆ ಓದಿಕೊಳ್ಳಬೇಕು.
ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 20
ಶಾರ್ಟ್ ಲಿಸ್ಟ್ ಬಿಡುಗಡೆ ದಿನ: ಆಗಸ್ಟ್ 27
ದಾಖಲಾತಿ ಪರಿಶೀಲನೆ: ಸೆಪ್ಟಂಬರ್ 09