ಸಮಹಾದಿ: ರಿಫಾಯಿ ಜುಮಾ ಮಸೀದಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ಸಮಹಾದಿ, ಆ. 15. ರಿಫಾಯಿ ಜುಮ್ಮಾ ಮಸೀದಿ ವತಿಯಿಂದ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ ರವರು ಅಧ್ಯಕ್ಷತೆ ವಹಿಸಿ ಧ್ವಜಾರೋಹಣಗೈದರು. ಖತೀಬರಾದ ರಫೀಕ್ ‌ನಿಝಾಮಿ ಉಸ್ತಾದ್ ಮತ್ತು ಮುಅಲ್ಲಿಮರಾದ ಇಬ್ರಾಹಿಂ ಮುಈನಿ ಉಸ್ತಾದರು ಸಂದೇಶ ಭಾಷಣ ಮಾಡಿದರು.
ನಂತರ ಸ್ವಾತಂತ್ರ್ಯ ಪ್ರಯುಕ್ತ ಮದ್ರಸದಲ್ಲಿ ನಡೆದ ಭಾಷಣ, ಹಾಡು, ಕ್ವಿಝ್ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Also Read  ದ.ಕ/ಉಡುಪಿ: ಉಭಯ ಜಿಲ್ಲೆಗಳ ವಿವಿಧೆಡೆ ಕಳ್ಳತನದ ಮಾಡುತ್ತಿದ್ದ ಕುಖ್ಯಾತ ಆರೋಪಿಗಳ ಸೆರೆ ➤ 13.82 ಲಕ್ಷ ರೂ.ಮೌಲ್ಯದ ಸೊತ್ತು ವಶ

ಈ ಸಂದರ್ಭದಲ್ಲಿ ಮಸೀದಿ ಕಾರ್ಯದರ್ಶಿಗಳಾದ ಫಲುಲ್, ಸಿನಾನ್, ಖಜಾಂಜಿ ಉಮರ್ ಫಾರೂಕ್ ಸದಸ್ಯರಾದ ಪಿ.ಎಂ ಅಬ್ದುಲ್ ರಹ್ಮಾನ್, ಸಾಬುಕುಂಙಿ, ಮುಸ್ತಫಾ, ಮಾಮು ಹಾಗೂ ಜಮಾಅತ್ ನ ಹಿರಿಯ ಸದಸ್ಯರಾದ ಹಸನ್ ಕುಂಞಿ ಹಾಜಿ, ಮಹಮ್ಮದ್ ರಾಗಿಪೇಟೆ, ಕುಂಞಮ್ಮದ್ ಸೇರಿದಂತೆ ಜಮಾಅತ್ ನ ಎಲ್ಲಾ ಸದಸ್ಯರು ಹಾಗೂ SSF ಮತ್ತು SBS ಸದಸ್ಯರು ಉಪಸ್ಥಿತರಿದ್ದರು.

error: Content is protected !!
Scroll to Top