ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಇಂದಿನಿಂದ ಸಿಗಲಿದೆ ದೇಶೀಯ ‘ಹುಲಿ’ ರಮ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 15. ಇಂದಿನಿಂದ “ಹುಲಿ” ಅನ್ನೋ ಮದ್ಯ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶ ವಿದೇಶಗಳಲ್ಲೂ ಸಂಚಲನ ಸೃಷ್ಟಿಸಲು ಸಜ್ಜಾಗಿದ್ದು, ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ತಯಾರಾದ ಇಂಡಿಯಾದ ಮೊದಲ ಜಗ್ಗರಿ ರಮ್ ಇದಾಗಿದೆ.

ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ಆದರೆ ಅದೆಲ್ಲಾ ವಿದೇಶದ್ದು. ಇದೀಗ ಭಾರತವು ತನ್ನದೇ ಆದ ವಿಶೇಷ ರಮ್ ನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದು ಕರ್ನಾಟಕದ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ ಅನ್ನೋದೇ ಮತ್ತೊಂದು ವಿಶೇಷ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ಮೂಲಕ ಇದೀಗ ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹುಲಿ ರಮ್ ಬಿಡುಗಡೆಗೆ ಸಜ್ಜಾಗಿದೆ.

Also Read  ಶಕ್ತಿ ಕ್ಯಾನ್‍ಕ್ರಿಯೇಟ್’ ಶಿಬಿರದ ಸಮಾರೋಪ.

ಭಾರತದಲ್ಲಿ ಮೊದಲ ಬಾರಿಗೆ ನಂಜನಗೂಡಿನ ಮೈಕ್ರೋ ಡಿಸ್ಟಲರಿಯಲ್ಲಿ ವಿಶ್ವದರ್ಜೆಯ ಬೆಲ್ಲದ ರಮ್ ತಯಾರಿಸಿದೆ. ಇದು ಆಗಸ್ಟ್ 15ರಂದು ದೇಶದಾದ್ಯಂತ ಮಾರುಕಟ್ಟೆಗೆ ಪ್ರವೇಶಿಸಲಿದೆ.

error: Content is protected !!
Scroll to Top