100 ವಂದೇಭಾರತ್ ರೈಲು ಖರೀದಿ ಟೆಂಡರ್ ರದ್ದುಗೊಳಿಸಿದ ರೈಲ್ವೇ ಇಲಾಖೆ…!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 15. 100 ವಂದೇ ಭಾರತ್‌ ರೈಲುಗಳ ಉತ್ಪಾದನೆ ಮತ್ತು ನಿರ್ವಹಣೆಗಾಗಿ ಭಾರತೀಯ ರೈಲ್ವೇ ಇಲಾಖೆ ನೀಡಿದ್ದ 30,000 ಕೋಟಿ ರೂ. ಮೌಲ್ಯದ ಟೆಂಡರನ್ನು ರದ್ದು ಮಾಡಿದೆ.

ರೈಲುಗಳ ಉತ್ಪಾದನೆಗೆ ಫ್ರೆಂಚ್‌ ಮೂಲದ ಕಂಪೆನಿ ಅಲ್‌ಸ್ಟೋಮ್‌ ಇಂಡಿಯಾ ಕಡಿಮೆ ಮೊತ್ತದ ಬಿಡ್‌ ಸಲ್ಲಿಸಿತ್ತು. ಆದರೆ ಇದು ಗರಿಷ್ಠ ಎಂದು ರೈಲ್ವೇ ಇಲಾಖೆ ಟೆಂಡರ್‌ ರದ್ದು ಮಾಡಿದೆ. ಫ್ರೆಂಚ್‌ ಕಂಪೆನಿ ಪ್ರತೀ ರೈಲಿಗೆ 150.9 ಕೋಟಿ ರೂ. ನಿಗದಿ ಮಾಡಿತ್ತು. ಆದರೆ ಭಾರತೀಯ ರೈಲ್ವೇ 140 ಕೋಟಿ ರೂ. ಅಂತಿಮಗೊಳಿಸಲು ಮುಂದಾಗಿತ್ತು. ರೈಲ್ವೇ ಇಲಾಖೆ ಕರೆದಿದ್ದ ಟೆಂಡರ್‌ಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ಡರ್‌ಗಳು ಆಗಮಿಸಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಇಲಾಖೆ ಟೆಂಡರ್‌ ಕರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ.

error: Content is protected !!
Scroll to Top