(ನ್ಯೂಸ್ ಕಡಬ) newskadaba.com ಮಂಗಳೂರು, ಆ. 15. ಮಂಗಳೂರು ಉತ್ತರ ಪೊಲೀಸ್ ಠಾಣಾ ವಠಾರದಲ್ಲಿರುವ ವಾರಿಸುದಾರರಿಲ್ಲದ ಮತ್ತು ವಾರಿಸುದಾರರು ಸ್ವೀಕರಿಸಲು ನಿರಾಕರಿಸಿದ 8 ಹಳೆಯ ದ್ವಿ ಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಿ ಬಂದ ಮೊತ್ತವನ್ನು ಸರಕಾರಕ್ಕೆ ಪಾವತಿ ಮಾಡಲಾಗುವುದು.
ಆದ್ದರಿಂದ ಆ.18 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವಠಾರದಲ್ಲಿ 8 ಹಳೆಯ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಠಾಣಾಧಿಕಾರಿಗಳು, ಮಂಗಳೂರು ಉತ್ತರ ಪೊಲೀಸ್ ಠಾಣೆ, ಬಂದರು, ಮಂಗಳೂರು ದೂ. ಸಂಖ್ಯೆ: 0824-2220516, ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಠಾಣೆ ಮೊ.ಸಂಖ್ಯೆ: 9480805338 ಸಂಪರ್ಕಿಸುವಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.