ಭಗ್ನ ಪ್ರೇಮಿಯ ಇರಿತಕ್ಕೆ ಪ್ರಾಣ ಕಳೆದುಕೊಂಡ ಕಾಲೇಜು ವಿದ್ಯಾರ್ಥಿನಿ ► ಪ್ರೀತಿ, ಪ್ರೇಮದ ಗುಂಗಿನಲ್ಲಿ‌ ಇನ್ನೊಬ್ಬರ ಜೀವನದಲ್ಲಿ ಚೆಲ್ಲಾಟವಾಡುವ ಸ್ವಾರ್ಥಿಗಳು

(ನ್ಯೂಸ್ ಕಡಬ) newskadaba.com ಸಂಪಾದಕೀಯ: ತನ್ನ ಪ್ರೀತಿ ನಿವೇದನೆಯನ್ನು ನಿರಾಕರಿಸಿದ ಒಂದೇ ಒಂದು ಕಾರಣಕ್ಕಾಗಿ ಸಿಟ್ಟಿನಿಂದ ಭಗ್ನ ಪ್ರೇಮಿಯೊಬ್ಬ ಸಹಪಾಠಿ ವಿದ್ಯಾರ್ಥಿನಿಯೋರ್ವಳನ್ನು ಚೂರಿಯಿಂದ ಇರಿದು ಕೊಲೆಗೈದ ಹೃದಯ ವಿದ್ರಾವಕ ಘಟನೆ ಸುಳ್ಯದಲ್ಲಿ ಮಂಗಳವಾರದಂದು ಸಂಜೆ ನಡೆದು ಹೋಯ್ತು.

ತಾನು ವ್ಯಾಸಂಗ ಮಾಡಿ ಉನ್ನತ ಸ್ಥಾನಕ್ಕೇರಬೇಕೆಂಬ ಆಸೆಯನ್ನಿಟ್ಟು ದೂರದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಶಾಂತಿ ನಗರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಹರೂ ಮೆಮೋರಿಯಲ್ ಕಾಲೇಜಿಗೆ ಆಗಮಿಸಿ ದ್ವಿತೀಯ ಬಿಎಸ್ಸಿ ಓದುತ್ತಿದ್ದ ಸೌಮ್ಯ ಸ್ವಭಾವದ ವಿದ್ಯಾರ್ಥಿನಿ ಅಕ್ಷತಾ ಭಗ್ನ ಪ್ರೇಮಿಯೊಬ್ಬನ ಇರಿತದಿಂದಾಗಿ ನಡು ರಸ್ತೆಯಲ್ಲೇ ಪ್ರಾಣ ಬಿಡಬೇಕಾಯಿತು. ಎಂದಿನಂತೆ ಕಾಲೇಜು ಬಿಟ್ಟು ಮನೆಗೆ ತೆರಳಬೇಕೆಂಬ ತುಡಿತದಿಂದ ಸೋಮವಾರ ಸಂಜೆ ಕಾಲೇಜಿನಿಂದ ಹೊರ ಬಂದು ಬಸ್ಸು ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಾ ತೆರಳುತ್ತಿದ್ದ ಅಕ್ಷತಾಳಿಗೆ ತಾನು ಕೆಲವೇ ಕ್ಷಣದಲ್ಲಿ ಪ್ರೀತಿಯನ್ನು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕಾಗಿ ತನ್ನದೇ ಸಹಪಾಠಿಯಿಂದ ಕೊಲೆಗೀಡಾಗುತ್ತೇನೆಂದು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ. ಅಕ್ಷತಾಳ ಮನೆಯವರಿಗೂ ತಮ್ಮ ಮನೆ ಹುಡುಗಿಯ ಹಿಂದೆ ದುರುಳರು ಬಿದ್ದಿದ್ದಾರೆನ್ನುವುದು ಗೊತ್ತಿರಲಿಕ್ಕಿಲ್ಲ. ಆದರೆ ವಿಧಿಯಾಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗಲ್ಲ.

Also Read  ಉಲ್ಲಾಳ ಬೀಚ್‍ನಲ್ಲಿ ಯೋಗ ಮತ್ತು ಸ್ವಚ್ಚತಾ ಅಭಿಯಾನ

ಏನನ್ನಾದರೂ ಸಾಧಿಸುವ ಮನಸ್ಸಿನಲ್ಲಿ ಕಾಲೇಜಿಗೆ ಬರುವ ಕೆಲವು ಸನ್ನಡತೆಯ ವಿದ್ಯಾರ್ಥಿಗಳ ನಡುವೆ ಗೊತ್ತು ಗುರಿಯಿಲ್ಲದೆ ಟೈಂಪಾಸ್ ಗಾಗಿ ಕಾಲೇಜಿಗೆ ಬರುವ ಹಲವು ವಿದ್ಯಾರ್ಥಿಗಳು ಪ್ರೀತಿ, ಪ್ರೇಮವೆಂಬ ಕೂಪಕ್ಕೆ ಬಿದ್ದು ಇನ್ನೊಬ್ಬರ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಾರೆ. ತಾನಾಯಿತು, ತನ್ನ ಪಾಡಾಯಿತು ಎನ್ನುವ ಸುಳ್ಯ ಎನ್ಎಂಸಿ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಅಕ್ಷತಾಳನ್ನು ಬಲಿ ಪಡೆದ ಭಗ್ನ ಪ್ರೇಮಿ ನೆಲ್ಲೂರು ಕೆಮ್ರಾಜೆ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಕಾರ್ತಿಕ್. ಒಂದೆರಡು ಸಲ ಮಾತ್ರವಲ್ಲ, ಬರೋಬ್ಬರಿ ಏಳು ಬಾರಿ ಚಾಕುವಿನಿಂದ ತಿವಿದು ಅಕ್ಷತಾಳನ್ನು ಅಮಾನವೀಯವಾಗಿ ಕೊಂದಿದ್ದಲ್ಲದೆ ತನ್ನದೇ ಕೈಯನ್ನು ಕೊಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಆರೋಪಿ ಕಾರ್ತಿಕ್ ನನ್ನು ಹಿಡಿದು ಪೋಲಿಸರಿಗೆ ವಿಷಯ ಮುಟ್ಟಿಸಿದ್ದಾರೆ. ಈ ನಡುವೆ ಆಕ್ಷತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೂಡಲೇ ಕರೆದುಕೊಂಡು ಹೋಗಲಾಯಿತಾದರೂ ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಾಳೆ.

Also Read  ➤ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತ ಪಿಯುಸಿ ವಿದ್ಯಾರ್ಥಿನಿ ಮೃತ್ಯು..!

ಪ್ರೀತಿ ಪ್ರೇಮವೆಂದು ಇನ್ನೊಬ್ಬರನ್ನು ಬಲಿ ಪಡೆಯುವ ಇಂತಹ ನೀಚರು ಜೈಲು ಪಾಲಾಗಿ ಕೆಲವೇ ಸಮಯಗಳಲ್ಲಿ ಜಾಮೀನು ಪಡೆದು ಹೊರಬರುವುದರಿಂದ ಕಾನೂನಿನ ಬಗ್ಗೆ ಯಾವುದೇ ಅಂಜಿಕೆ ಇಲ್ಲದಂತಾಗಿದೆ. ವಿದೇಶಗಳಲ್ಲಿ ಇರುವಂತೆ ಇಂತಹವರನ್ನು ಗಲ್ಲಿಗೇರಿಸುವ ಕಾನೂನು ಭಾರತದಲ್ಲಿ ಜಾರಿಯಾದರೆ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ. ಇಲ್ಲದೇ ಇದ್ದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.

error: Content is protected !!
Scroll to Top