ಮೈಸೂರು ದಸರಾ- ವಾಟ್ಸಾಪ್ ನಲ್ಲೂ ಟಿಕೆಟ್ ಲಭ್ಯ

(ನ್ಯೂಸ್ ಕಡಬ) newskadaba.com ಮೈಸೂರು, ಆ. 14. ಈ ವರ್ಷದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಅಕ್ಟೋಬರ್ 3 ರಿಂದ ಅ.12 ರ ವರೆಗೆ ಜರುಗಲಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸುವ ಅವಕಾಶವನ್ನು ಕಲ್ಪಿಸುವ ಮೂಲಕ ಸರಕಾರವು ಗುಡ್ ನ್ಯೂಸ್ ನೀಡಿದೆ.

 

ಹೀಗಾಗಿ ಇನ್ನುಮುಂದೆ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಟಿಕೆಟ್ ಗಾಗಿ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಇದರಿಂದ ಕ್ಯೂ ನಿಂತು ಟಿಕೆಟ್ ಪಡೆಯುವ ಸಮಯ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

Also Read  ಭದ್ರತೆ ಪರಿಶೀಲನೆ ವೇಳೆ ಮಹಿಳೆಯ ಬ್ಯಾಗ್ ನಲ್ಲಿ ಚಾಕು ಪತ್ತೆ

 

ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ವಾಟ್ಸಾಪ್​​ನಲ್ಲಿ 8884160088 ನಂಬರ್​ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಮೊಬೈಲ್​ನಲ್ಲೇ ಟಿಕೆಟ್ ಟಿಕೆಟ್ ಪಡೆಯಬಹುದು. ವಾಟ್ಸಾಪ್​​ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ ಎನ್ನಲಾಗಿದೆ.

error: Content is protected !!
Scroll to Top