ಸಮೀರ್‌ ಹತ್ಯೆ ಪ್ರಕರಣ – ನಾಲ್ವರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ. 14. ಟಾರ್ಗೆಟ್‌ ಇಲ್ಯಾಸ್‌ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಕಡಪ್ಪರ ಸಮೀರ್‌ ಎಂಬಾತನ ಹತ್ಯೆಗೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಇಲ್ಯಾಸ್‌ ಪತ್ನಿಯ ಸಹೋದರ ಮೊಹಮ್ಮದ್‌ ನೌಷಾದ್‌ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಅಲ್ಲದೇ ನೌಷದ್‌ ಗೆ ನಾಟೇಕಲ್‌ನ ನಿಯಾಝ್, ಬಜಾಲ್‌ ನ ತನ್ವೀರ್‌, ಪಡುಬಿದ್ರೆಯ ಇಕ್ಬಾಲ್‌ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಕೂಡಾ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಇನ್ನು ಈ ಕೊಲೆಯು ಟಾರ್ಗೆಟ್ ಇಲ್ಯಾಸ್‌ ಹತ್ಯೆಗೆ ಪ್ರತಿಕಾರವಾಗಿ  ಮಾಡಲಾಗಿದ್ದು, ಸಮೀರ್ ತಾಯಿಯೊಂದಿಗೆ ಮನೆಗೆ ತೆರಳುವಾಗ ಆತನನ್ನು ಕಾರಿನಲ್ಲಿ ಬಂದಿದ್ದ ಅಪರಿಚಿತರ ತಂಡ ತಲವಾರಿನಿಂದ ಕಡಿದು ಹತ್ಯೆ ನಡೆಸಿತ್ತು.

Also Read  ಕೇರಳದಿಂದ ಕೊಡಗಿಗೆ ರಾತ್ರೋರಾತ್ರಿ ಕಸ ತಂದು ಸುರಿದ ಆರೋಪ ➤ ಇಬ್ಬರು ಅರೆಸ್ಟ್‌…

error: Content is protected !!
Scroll to Top