ತುಂಗಭದ್ರಾ ಅಣೆಕಟ್ಟು ದುರಸ್ತಿ ಕಾರ್ಯ ಸರ್ಕಾರದ ಮುಂದೆ ಯೋಜನೆ ರೂಪಿಸಿದ ತಜ್ಞರ ತಂಡ

(ನ್ಯೂಸ್ ಕಡಬ) newskadaba.com ಹೊಸಪೇಟೆ, ಆ. 13.  ತುಂಗಭದ್ರಾ ಅಣೆಕಟ್ಟಿನ 19ನೇ ಕ್ರೆಸ್ಟ್ ಗೇಟ್ ಸರಿಪಡಿಸಲು ತಜ್ಞರ ತಂಡ ಎರಡು ಯೋಜನೆಗಳನ್ನು ರೂಪಿಸಿದೆ. ದುರಸ್ತಿ ಯೋಜನೆಗಳನ್ನುಈ ತಂಡ ರಾಜ್ಯ ಸರ್ಕಾರದ ಮುಂದೆ ಇಡಲಾಗಿದ್ದು, ದುರಸ್ತಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಜಲಾಶಯದ ಪರಿಸ್ಥಿತಿ ತಿಳಿದುಕೊಳ್ಳಲು ಇಬ್ಬರು ತಜ್ಞರನ್ನು ಅಣೆಕಟ್ಟಿನ ಸ್ಥಳಕ್ಕೆ ನಿಯೋಜಿಸಿವೆ. ನಾಯ್ಡು ಅವರ ಪ್ಲಾನ್ ಎ ಪ್ರಕಾರ, ಅಣೆಕಟ್ಟಿನಲ್ಲಿ ನೀರಿನ ಸಂಗ್ರಹವು 60 ಟಿಎಂಸಿ ಅಡಿ ಇಳಿದ ಮೇಲೆ ತಂಡವು ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತದೆ. ಪ್ಲಾನ್ ಬಿ ಅಡಿಯಲ್ಲಿ, ತಂಡವು ಹೆವಿ ಮೆಟಲ್ ಶೀಟ್‌ಗಳನ್ನು ಬಳಸಿ ಸ್ಥಳದಿಂದ ನೀರನ್ನು ಬೇರೆಡೆ ತಿರುಗಿಸಿದ ನಂತರ ಗೇಟ್‌ನ ಅರ್ಧವನ್ನು ರಿಪೇರಿ ಮಾಡುತ್ತದೆ ಎಂದು ತಂಡದ ಹಿರಿಯ ಸದಸ್ಯರು ತಿಳಿಸಿದ್ದಾರೆ.

Also Read  UPSC ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

 

error: Content is protected !!
Scroll to Top