ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ವಿವಿಧ ಸಂಘ ಸಂಸ್ಥೆಗಳು, ಹಿರಿಯ ವಿದ್ಯಾರ್ಥಿಗಳು ಭಾಗಿ

(ನ್ಯೂಸ್ ಕಡಬ) newskadaba.com ಕೆಮ್ಮಾರ, ಆ. 13. ಇಲ್ಲಿನ ಕೆಮ್ಮಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರಯೋತ್ಸವ ಪೂರ್ವಕವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಒಕ್ಕೂಟ ಕೊಯಿಲ ಅಧ್ಯಕ್ಷೆ ಶ್ರೀಮತಿ ಸೆಲಿಕತ್, ವಲಕಡಮ ಒಕ್ಕೂಟ ಅಧ್ಯಕ್ಷ ಸುದೀಶ್, ಕೆಮ್ಮಾರ ಒಕ್ಕೂಟ ಅಧ್ಯಕ್ಷ ರವಿಕಾಂತ ಬಡ್ಡಮೆ, ಸೇವಾಪ್ರತಿನಿಧಿಗಳಾದ ಕವಿತಾ ಮತ್ತು ಗೀತಾ ಹಾಗೂ ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃಧ್ದಿ ಸಮಿತಿ ಸದಸ್ಯರು ಸೇರಿ ಸ್ವಚ್ಚತಾ ಕಾರ್ಯಕ್ರಮ ನಿರ್ವಹಿಸುವ ಮೂಲಕ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ತಯಾರಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯ ಅಭಿರುಚಿ ಹೊಂದಿದ್ದಲ್ಲಿ ಮಕ್ಕಳ ಶಿಕ್ಷಣದ ಪ್ರಗತಿ ಸಾಧ್ಯ. ಸ್ವಯಂ ಪ್ರೇರಿತರಾಗಿ ಬಂದು ಶಾಲೆಯ ಪರಿಸರ ಸ್ವಚ್ಚಗೊಳಿಸಲು ವಿವಿಧ ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಕೆಮ್ಮಾರ ಶಾಲಾಭಿವೃಧ್ದಿ ಸಮಿತಿ ಸದಸ್ಯ ವಾಮನ ಬರಮೇಲು, ರಾಮಣ್ಣ ನೇಕಾರ ಬಡ್ಡಮೆ, ಅಧ್ಯಾಪಕ ವೃಂದದವರು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕೊಯಿಲ, ಕೆಮ್ಮಾರ, ವಲಕಡಮ ಒಕ್ಕೂಟದ ಸದಸ್ಯರು , ಸೇವಾಪ್ರತಿನಿಧಿಗಳು, ಎಸ್. ವೈ. ಎಸ್ ಕೆಮ್ಮಾರ ಇದರ ಅಧ್ಯಕ್ಷ ಶರೀಫ್ ಕೆಮ್ಮಾರ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಮುಸ್ತಫಾ ಬರಮೇಲು, ಶಂಸುದ್ದೀನ್ ಅಳಕೆ, ನಝೀರ್ ಕೆಮ್ಮಾರ, ಶೌಕತ್ ಜೇಡರಪೇಟೆ, ಶಿವಾನಂದ, ಸಫ್ವಾನ್ ಆಕಿರೆ, ಜುನೈದ್, ರಹಿಮಾನ್ ಖಾನ್, ಪ್ರಕಾಶ್ ಕೆ. ಆರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆಮ್ಮಾರ ಶಾಲಾಭಿವೃಧ್ದಿ ಸಮಿತಿ ಸದಸ್ಯ ಶ್ರೀ ಪದ್ಮನಾಭ ಶೆಟ್ಟಿ ಕೆಮ್ಮಾರ ಉಪಹಾರದ ವ್ಯವಸ್ಥೆ ಮಾಡಿಕೊಟ್ಟರು.

error: Content is protected !!

Join the Group

Join WhatsApp Group