ಗ್ರಾಜ್ಯುವೇಟ್ ಇಂಜಿನಿಯರಿಂಗ್ ಟ್ರೈನಿ ಹುದ್ದೆ- ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 13. ಮಂಗಳೂರಿನ ದಿಯಾ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ  ಗ್ರಾಜ್ಯುವೇಟ್ ಇಂಜಿನಿಯರಿಂಗ್ ಟ್ರೈನಿ ಹುದ್ದೆಗೆ ನೇರ ಸಂದರ್ಶನವು ಆಗಸ್ಟ್ 14ರ ಬುಧವಾರದಂದು ನಗರದ ಮೇರಿಹಿಲ್, ಹೆಲಿಪ್ಯಾಡ್ ಹತ್ತಿರ ಗ್ಲೋ ಟಚ್ (ದಿಯಾ ಸಿಸ್ಟಮ್ ಪ್ರೈವೆಟ್ ಲಿಮಿಟೆಡ್) ನಲ್ಲಿ ಆಯೋಜಿಸಲಾಗಿದೆ.

ಬಿ.ಇ/ ಬಿ.ಟೆಕ್/ ಬಿ.ಸಿ.ಎ/ ಎಂ.ಸಿ.ಎ/ ಬಿ.ಎಸ್.ಸಿ/ ಎಂ.ಎಸ್.ಸಿ/ ಡಿಪ್ಲೋಮಾ ಇನ್‍ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ  ನೇರ ಸಂದರ್ಶನದಲ್ಲಿ ಭಾಗವಹಿಸಬೇಕು.  ಹೆಚ್ಚಿನ ಮಾಹಿತಿಗೆ ಮಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share