ಬೈಂದೂರು: ತಾಲೂಕು ಕಚೇರಿ ಎದುರು ನ್ಯಾಯಕ್ಕಾಗಿ ಧರಣಿ

(ನ್ಯೂಸ್ ಕಡಬ) newskadaba.com ಬೈಂದೂರು, ಆ. 13.  ಒಂದು ಕಡೆ ಕಾಂಗ್ರೆಸ್ ಆಡಳಿತದ ವಿರುದ್ಧ ಬಿಜೆಪಿ, ಜೆಡಿಎಸ್ ಮೈಸೂರು ‘ಛಲೋ ಯಾತ್ರೆ’ ನಡೆಸುತ್ತಿದ್ದರೆ, ಇನ್ನೊಂದು ಕಡೆ ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎನ್ನುವ ಆರೋಪ ಪಡೆದುಕೊಳ್ಳುತ್ತಿದೆ.

ಶಾಸಕರ ಜನತಾ ಕಾರ್ಯಾಲಯಗಳಲ್ಲಿ ಅಧಿಕಾರಿಗಳ ಸಭೆ ಕರೆದರೆ ಅಧಿಕಾರಿಗಳು ಭಾಗವಹಿಸಬಾರದು ಎಂದು ಉಡುಪಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ಇದರಿಂದಾಗಿ ಬೈಂದೂರಿನಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷ ಭಿನ್ನಾಭಿಪ್ರಾಯಕ್ಕೆ ತಿರುಗಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು

 

error: Content is protected !!
Scroll to Top