ಮಂಗಳೂರು: ತುಳು ನಾಟಕ ರಂಗದ ಖ್ಯಾತ ನಟ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 13.  ಖ್ಯಾತ ಕಲಾವಿದ, ತುಳು ನಾಟಕ ರಂಗದ ಬರಹಗಾರ, ಸೂಪರ್ ಹಿಟ್ ತುಳು ನಾಟಕ ಒರಿಯರ್ದೊರಿ ಅಸಲ್‌ ನಲ್ಲಿ ‘ನಾಥು’ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ಅಶೋಕ್ ಶೆಟ್ಟಿ (53) ಮೃತಪಟ್ಟ ಕುರಿತು ವರದಿಯಾಗಿದೆ.

ಇವರು ಅಂಬ್ಲಿಮೊಗರುವಿನ ತಮ್ಮ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ. ವೃತ್ತಿಪರ ರಂಗಭೂಮಿಯ ನಟ ಮತ್ತು ಬರಹಗಾರ ಅಶೋಕ್ ಹಲವು ದಶಕಗಳ ಕಾಲ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ.

Also Read  ಉಡುಪಿ: ಅಗಲಿದ ಹಿರಿಯ ಚೇತನಗಳಿಗೆ ನುಡಿನಮನ, ಶ್ರದ್ಧಾಂಜಲಿ

 

error: Content is protected !!
Scroll to Top