ಸಕಲೇಶಪುರ: ಭೂಕುಸಿತ ಹಿನ್ನೆಲೆ- 10 ರೈಲುಗಳ ಸಂಚಾರ ರದ್ದು..!!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಆ. 12. ಸಕಲೇಶಪುರ- ಬಾಳುಪೇಟೆ ನಡುವೆ ಭೂಕುಸಿತ ಸಂಭವಿಸಿದ ಪರಿಣಾಮ ಈ ಮಾರ್ಗದ 10 ರೈಲುಗಳ ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ.

 

ಆಗಸ್ಟ್ 12, 13ರಂದು ಕೆಎಸ್‌ಆರ್ ಬೆಂಗಳೂರು -ಕಾರವಾರ ಎಕ್ಸ್ ಪ್ರೆಸ್, ಎಸ್.ಎಂ.ವಿ.ಟಿ. ಬೆಂಗಳೂರು ಮುರುಡೇಶ್ವರ ಎಕ್ಸ್ ಪ್ರೆಸ್, ವಿಜಯಪುರ -ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ಸ್ಪೆಷಲ್ ರೈಲು ಸಂಚಾರ ರದ್ದಾಗಿದೆ.

ಆಗಸ್ಟ್ 13 ರಂದು ಕಾರವಾರ -ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಆಗಸ್ಟ್ 13, 14 ರಂದು ಮಂಗಳೂರು ಸೆಂಟ್ರಲ್ -ವಿಜಯಪುರ ಎಕ್ಸ್ ಪ್ರೆಸ್ ಸ್ಪೆಷಲ್ ರೈಲು ಸಂಚಾರ ರದ್ದು ಮಾಡಲಾಗಿದೆ.

Also Read  ಸುಬ್ರಹ್ಮಣ್ಯ: ಭಾರೀ ಮಳೆಗೆ ರದ್ದಾಗದ ವಿವಿ ಪರೀಕ್ಷೆ- ನೀರು ತುಂಬಿದ ರಸ್ತೆಯಲ್ಲೇ ನಡೆದು ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಗಳು

ಆಗಸ್ಟ್ 13ರಂದು ಕಾರವಾರ -ಯಶವಂತಪುರ, ಯಶವಂತಪುರ ಕಾರವಾರ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದಾಗಿದೆ.

ಆಗಸ್ಟ್ 12, 13ರಂದು ಕಣ್ಣೂರು -ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ರದ್ದು ಮಾಡಲಾಗಿದೆ.

error: Content is protected !!
Scroll to Top