ನವಿಲು ಸಾಂಬರ್ ರೆಸಿಪಿ ವೈರಲ್..! ಯೂಟ್ಯೂಬರ್ ಅರೆಸ್ಟ್

(ನ್ಯೂಸ್ ಕಡಬ) newskadaba.com ತೆಲಂಗಾಣ, . 12. ನವಿಲಿನ ಸಾಂಬಾರು​ ಮಾಡುವ ಪಾಕವಿಧಾನವನ್ನು ತನ್ನ ಯೂಟ್ಯೂಬ್‌ ಚಾನಲ್​ ನಲ್ಲಿ ಅಪ್‌ಲೋಡ್ ಮಾಡಿದ್ದ ಯೂಟ್ಯೂಬರ್ ಓರ್ವನನ್ನು ಬಂಧಿಸಿದ ಕುರಿತು ತೆಲಂಗಾಣದಿಂದ ವರದಿಯಾಗಿದೆ.

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲ ನಿವಾಸಿ ಪ್ರಣಯ್ ಎಂಬಾತ ಈ ವಿಡಿಯೋ ಮಾಡಿದ್ದನು. ವಿಡಿಯೋ ವೀಕ್ಷಿಸಿದ ನೆಟ್ಟಿಗರಿಂಧ ಭಾರೀ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ತಕ್ಷಣವೇ ಪ್ರಣಯ್ ವಿಡಿಯೋವನ್ನು ಯೂಟ್ಯೂಬ್​ನಿಂದ ​ ಡಿಲೀಟ್​ ಮಾಡಿದ್ದಾರೆ ಎನ್ನಲಾಗಿದೆ. ಆದರೆ ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ  ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ನವಿಲು ಗರಿ ಹಾಗೂ ಸಾಂಬರ್​ ಅನ್ನು ವಶಪಡಿಸಿಕೊಂಡಿದ್ದಾರೆ. ಒಂದು ವೇಳೆ ಅದು ನವಿಲು ಖಾದ್ಯ ಎಂಬುದು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಸ್ಪೀಕರ್ ಯು.ಟಿ ಖಾದರ್‌ ಅವರಿಗೆ ‘ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ ಪ್ರದಾನ

error: Content is protected !!
Scroll to Top