ಗುಂಡ್ಯ: ಕಾರಿನ ಮೇಲೆ ಬಿದ್ದ ಕಂಟೇನರ್ ಲಾರಿ – ಕಾರು ಸಂಪೂರ್ಣ ನಜ್ಜುಗುಜ್ಜು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.10. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿಯೊಂದು ಕಾರಿನ ಮೇಲೆ ಬಿದ್ದ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಶಿರಾಡಿ ಘಾಟ್ ನಲ್ಲಿ ಶನಿವಾರದಂದು ನಡೆದಿದೆ.

ಗುಂಡ್ಯದಿಂದ ಸಕಲೇಶಪುರ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ರಸ್ತೆ ಬದಿಯಲ್ಲಿ ‌ಕಾಡಿನಂಚಿನಿಂದ ಬೀಳುವ ನೀರನ್ನು ನೋಡಲೆಂದು ಹೆದ್ದಾರಿ ಬದಿ ಕಾರು ನಿಲ್ಲಿಸಿ ಹೊರಗಡೆ ನಿಂತಿದ್ದ ವೇಳೆ ಸಕಲೇಶಪುರ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಡಿಸೈರ್ ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

Also Read  ಮನೆ ಹಿಂಬಾಗಿಲು ಮುರಿದು 3.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

error: Content is protected !!