ಮಡಂತ್ಯಾರು: ಮಣ್ಣು ಅಗೆಯುತ್ತಿದ್ದಾಗ ಗುಡ್ಡ ಕುಸಿದು ಹೂತು ಹೋದ ಹಿಟಾಚಿ ► ಮಣ್ಣಿನೊಳಗೆ ಬಾಕಿಯಾದ ಆಪರೇಟರ್

(ನ್ಯೂಸ್ ಕಡಬ) newskadaba.com ಮಡಂತ್ಯಾರು, ಫೆ.19. ಮಣ್ಣು ಅಗೆಯುತ್ತಿದ್ದ ಹಿಟಾಚಿ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಹಿಟಾಚಿ ಆಪರೇಟರ್ ಮಣ್ಣಿನೊಳಗೆ ಕೆಲಕಾಲ ಬಾಕಿಯಾದ ಘಟನೆ ಮಡಂತ್ಯಾರಿನಲ್ಲಿ ಸೋಮವಾರದಂದು ನಡೆದಿದೆ.

ಘಟನೆಯಲ್ಲಿ ಹಿಟಾಚಿ ಆಪರೇಟರ್ ದೀಪಕ್ (21) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹಿಟಾಚಿ ಕೆಲಕಾಲ ಮಣ್ಣಿನೊಳಗೆ ಸಂಪೂರ್ಣ ಹೂತು‌ಹೋಗಿತ್ತು. ಬಳಿಕ ಸ್ಥಳೀಯರು ಆಗಮಿಸಿ ಮಣ್ಣನ್ನು ತೆರವುಗೊಳಿಸಿ ಆಪರೇಟರ್ ದೀಪಕ್ ನನ್ನು ಹೊರತೆಗೆದರು.

Also Read  ಕರಾವಳಿ ಪ್ರದೇಶದಲ್ಲಿಈದುಲ್ ಫಿತ್ರ ಹಬ್ಬದ ಸಂರ್ಭಮಾಚರಣೆ

error: Content is protected !!